‘ಗೋ ಕೊರೋನಾ’ ಹೋರಾಟದ ನಾಯಕ ರಾಮದಾಸ್ ಅಠಾವಳೆಗೆ ಕೊರೋನಾ ಪಾಸಿಟಿವ್

Prasthutha|

ಕೇಂದ್ರ ಸಚಿವ ರಾಮದಾಸ್ ಅಠಾವಳೆಗೆ ಕೊರೋನಾ ಧೃಢಪಟ್ಟಿದೆ. ಆರಂಭದಲ್ಲಿ ಕೊರೋನಾ ವ್ಯಾಪಿಸುತ್ತಿರುವಾಗ ‘ಗೋ ಕೊರೋನಾ, ಕೊರೋನಾ ಗೋ’ ಎಂಬ ಘೋಷಣೆಯನ್ನು ಜಪಿಸುವ ಮೂಲಕ ಅಠಾವಳೆ ವಿಶ್ವದ ಗಮನ ಸೆಳೆದಿದ್ದರು.ಕೋವಿಡ್ ಧೃಢವಾಗುವ ಮೊದಲು ಅಠಾವಳೆ ಮುಂಬೈಯಲ್ಲಿ ನಡೆದ ಪಕ್ಷದ ಸಮಾರಂಭದಲ್ಲಿ ಬಾಗವಹಿಸಿದ್ದರು.

- Advertisement -

ಕಳೆದ ಫೆಬ್ರವರಿಯಲ್ಲಿ ಕೋವಿಡ್ ಹರಡುವುದರ ವಿರುದ್ಧ ಇಂಡಿಯಾ ಗೇಟ್ ಬಳಿ ಕೆಲವು ಸನ್ಯಾಸಿಗಳು ಮತ್ತು ರಾಜತಾಂತ್ರಿಕರೊಂದಿಗೆ ರಾಮಾದಾಸ್ ಅಠಾವಳೆಯವರು ಕೂಗಿದ ಘೋಷಣೆ ‘ಗೋ ಕೊರೋನಾ’ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ರಾಜ್ಯಸಭಾ ಸಂಸದ ಅಠಾವಳೆ, ಸಾಮಾಜಿಕ ನ್ಯಾಯ ಸಚಿವರಾಗಿದ್ದಾರೆ.

- Advertisement -