“ಗೋಮಾಂಸ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್ ಎ ಒಂದೇ: ಆರ್ ಎಸ್ ಎಸ್ ಗೆ ತಿರುಗೇಟು ನೀಡಿದ ಸಾಧ್ವಿ ಪ್ರಾಚಿ

Prasthutha: July 11, 2021

ಹೊಸದಿಲ್ಲಿ: “ಗೋಮಾಂಸ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್ ಎ ಒಂದೇ” ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಆರ್ ಎಸ್ ಎಸ್ ಗೆ ತಿರುಗೇಟು ನೀಡಿದ್ದಾರೆ.


ಇತ್ತೀಚೆಗೆ ಸಮಾರಂಭವೊಂದರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಭಾಗವತ್, “ಯಾವುದೇ ಧರ್ಮಗಳಾದರೂ ಎಲ್ಲಾ ಭಾರತೀಯರು ಒಂದೇ. ಇಲ್ಲಿನ ಹಿಂದೂಗಳು ಮುಸ್ಲಿಮರ ಡಿಎನ್ ಎ ಒಂದೇ” ಎಂದು ಹೇಳಿದ್ದರು.


ಈ ಹೇಳಿಕೆಗೆ ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯ್ರಮವೊಂದರಲ್ಲಿ ತಿರುಗೇಟು ನೀಡಿರುವ ಪ್ರಾಚಿ, “ದನದ ಮಾಂಸ ತಿನ್ನುವವರನ್ನು ಹೊರತುಪಡಿಸಿ ಉಳಿದವರೆಲ್ಲಾ ಒಂದೇ ಡಿಎನ್ ಎಯವರು” ಎಂದು ಹೇಳಿದ್ದಾರೆ.
ರಾಜಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ನ ಹೆಸರಿನಲ್ಲಿ ಮೋಸಗೊಳಿಸಿ ಮತಾಂತರಗೊಳಿಸಲಾಗುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದರು.
ಭಾರತೀಯರೆಲ್ಲರ ಡಿಎನ್ ಎ ಒಂದೇ ಇರಬಹುದು, ಆದರೆ ನಮ್ಮಲ್ಲಿ ಗೋಮಾಂಸ ಸೇವಿಸುವವರ ಡಿಎನ್ ಎ ಇರುವುದಿಲ್ಲ ಎಂದು ಪ್ರಾಚಿ ಹೇಳಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ