ಗೃಹ ಬಂಧನದಲ್ಲಿ ಕಾಂಗ್ರೆಸ್ ಮುಖ್ಯಸ್ಥ

Prasthutha|

ಲಕ್ನೊ: ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೊಳಗಾಗಿರುವ ಹಥ್ರಾಸ್ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗುವುದಕ್ಕಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಗಮಿಸುವುದಕ್ಕೆ ಮುಂಚಿತವಾಗಿ ಕಾಂಗ್ರೆಸ್ ನ ಉತ್ತರ ಪ್ರದೇಶ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲುರನ್ನು ಗೃಹ ಬಂಧನದಲ್ಲಿರಿಸಲಾಗಿದೆ.

- Advertisement -

“ಯುಪಿ ಕಾಂಗ್ರೆಸ್ ನ ಅಧ್ಯಕ್ಷ ಶ್ರೀ ಅಜಯ ಕುಮಾರ್ ಲಲ್ಲುಜಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಈ ಸರಕಾರ ಅದೆಷ್ಟು ಭಯಪಟ್ಟಿದೆ. ನಾವು ನಿಲ್ಲಿಸಲಾರೆವು” ಎಂದು ಯುಪಿ ಕಾಂಗ್ರೆಸ್ ಟ್ವೀಟ್ ಹೇಳಿದೆ.