ಗಾಂಧಿ ಜಯಂತಿಯಂದು ಹಿಂದುತ್ವವಾದಿಗಳಿಂದ ಗೋಡ್ಸೆ ಝಿಂದಾಬಾದ್ ಟ್ವಿಟ್ಟರ್ ಅಭಿಯಾನ

ನವದೆಹಲಿ : ಗಾಂಧಿ ಜಯಂತಿಯನ್ನು ವಿರೋಧಿಸಿ ಹಿಂದುತ್ವವಾದಿಗಳು ನಾಥೂರಾಮ್ ಗೋಡ್ಸೆ ಝಿಂದಾಬಾದ್ ಅಭಿಯಾನ ನಡೆಸಿದ್ದಾರೆ. ಪ್ರಸ್ತುತ ಒಂದು ಲಕ್ಷದ ಹದಿನಾರು ಸಾವಿರ ಟ್ವೀಟ್ ಮಾಡಲಾಗಿದೆ. ನಾಥೂರಾಮ್ ಗೋಡ್ಸೆ ಝಿಂದಾಬಾದ್ (#नाथूरामगोडसेजिंदाबाद) ಅಭಿಯಾನ ಇಂದು ಟ್ವಿಟ್ಟರ್ ಟ್ರೆಂಡ್ ನಲ್ಲಿ 21ನೇ ಸ್ಥಾನಕ್ಕೆ ತಲುಪಿದೆ.

ಅಕ್ಟೋಬರ್ 2ರಂದು ಬೆಳಿಗ್ಗೆ 5 ಗಂಟೆಯ ಸಮಯ ನಾಥೂರಾಮ್ ಗೋಡ್ಸೆ ಝಿಂದಾಬಾದ್ (#नाथूरामगोडसेजिंदाबाद) ಹ್ಯಾಶ್ ಟ್ಯಾಗ್ ಬಳಸುವ ಟ್ವೀಟ್ ಗಳ ಸಂಖ್ಯೆ ಹೆಚ್ಚಳವಾಗತೊಡಗಿತು. ಶುಕ್ರವಾರ ಮಧ್ಯಾಹ್ನ 1ಗಂಟೆಗೆ 80,000 ಟ್ವೀಟ್ಗಳನ್ನು ನಾಥೂರಾಮ್ ಗೋಡ್ಸೆ ಝಿಂದಾಬಾದ್ ಹ್ಯಾಶ್ ಟ್ಯಾಗ್ ನಲ್ಲಿ ಬಳಸಲಾಗಿದೆ. ಈ ಹ್ಯಾಶ್ ಟ್ಯಾಗ್ ಅಭಿಯಾನ ಬೆಳಿಗ್ಗೆ 1.50ಕ್ಕೆ ಪ್ರಾರಂಭವಾಗಿತ್ತು.

- Advertisement -

ಅಭಿಯಾನವನ್ನು ಹರ್ವನ್ಶ್ ಬಾತ್ರಾ ಎಂಬ ಟ್ವಿಟ್ಟರ್ ಐಡಿಯಿಂದ ಪ್ರಾರಂಭಿಸಲಾಗಿದೆ. ಕೋಲ್ಕತ್ತಾದಲ್ಲಿ ನಾಥೂರಾಮ್ ಗೋಡ್ಸೆ ಅಮರ್ ರಹೇ (#नाथूरामगोडसेअमर_रहे ) ಎಂಬ ಮತ್ತೊಂದು ಹ್ಯಾಶ್ ಟ್ಯಾಗ್ 18,000 ಟ್ವೀಟ್ ಗಳೊಂದಿಗೆ ಟ್ರೆಂಡಿಂಗ್ ಆಗುತ್ತಿದೆ.