ಗುಜರಾತ್: ವಿದೇಶಿಗರನ್ನು ಚುನಾವಣಾ ಪ್ರಚಾರಕ್ಕಿಳಿಸಿದ ಬಿಜೆಪಿ; ಚುನಾವಣಾ ಆಯೋಗಕ್ಕೆ ದೂರು

ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ವಿದೇಶಿ ಪ್ರಜೆಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.


ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಪ್ರಚಾರದಲ್ಲಿ ಭಾಗವಹಿಸಿದ ವಿದೇಶಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

- Advertisement -


ವಿದೇಶಿಯರನ್ನು ಒಳಗೊಂಡ ಚುನಾವಣಾ ಅಭಿಯಾನವು 1951 ರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ವೀಸಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸಾಕೇತ್ ಗೋ ಪತ್ರದಲ್ಲಿ ತಿಳಿಸಿದ್ದಾರೆ.


ವಿದೇಶಿಗರು ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ವೀಡಿಯೊ ಗುಜರಾತ್ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ.


“ನಿಮಗೆ ಒಬ್ಬ ಮಹಾನ್ ನಾಯಕನಿದ್ದಾನೆ. ನಿಮ್ಮ ನಾಯಕನನ್ನು ನಂಬಿ” ಎಂಬ ವಿದೇಶಿಗರ ಮಾತನ್ನು ಶೀರ್ಷಿಕೆಯನ್ನಾಗಿ ಬಳಸಿ ಗುಜರಾತ್ ಬಿಜೆಪಿ ಈ ವೀಡಿಯೊವನ್ನು ಪ್ರಸಾರ ಮಾಡಿತ್ತು.