ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ವತಿಯಿಂದ ಜಿಲ್ಲಾದ್ಯಂತ ಲಕ್ಷದ್ವೀಪದೊಂದಿಗೆ ಐಕಮತ್ಯ ತೋರಿಸಲು ಬಿತ್ತಿಪತ್ರ ಪ್ರದರ್ಶನ

Prasthutha|

ಉಡುಪಿ :  ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ “ಜನ ವಿರೋಧಿ” ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರಿಗೆ ಬೆಂಬಲವಾಗಿ ಐಕಮತ್ಯ ತೋರಿಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ವತಿಯಿಂದ ಜಿಲ್ಲಾದ್ಯಂತ ಬಿತ್ತಿಪತ್ರ ಪ್ರದರ್ಶನ ಮಾಡಲಾಯಿತು.

ಲಕ್ಷದ್ವೀಪದ ಮೂಲ ನಿವಾಸಿಗಳ ಧಾರ್ಮಿಕ, ಸಾಂಸ್ಕೃತಿಕ, ಭಾಷಿಕ ಅಸ್ಮಿತೆ ಮತ್ತು ನಾಗರಿಕ ಹಕ್ಕುಗಳಿಗೆ ಸಂಬಂಧಿಸಿ ಕೇಂದ್ರ ಸರಕಾರ ತಾಳುತ್ತಿರುವ ನಡೆಗಳು ಮತ್ತು ಬಿಜೆಪಿ ನಾಯಕ ಮತ್ತು ಮೋದಿಯ ನಿಕಟವರ್ತಿ ಪ್ರಫುಲ್ ಪಟೇಲ್ ರನ್ನು ಅಲ್ಲಿನ ಆಡಳಿತಾಧಿಕರಿಯಾಗಿ ನೇಮಿಸಿರಿವುದರ ಹಿಂದೆ ಇರುವಂತಹ ದುಷ್ಟ ಉದ್ದೇಶವನ್ನು ಖಂಡಿಸಿ ಉಡುಪಿ ಜಿಲ್ಲಾದ್ಯಂತ ಲಕ್ಷದ್ವೀಪದೊಂದಿಗೆ ಐಕಮತ್ಯ ತೋರಿಸಲು ಬಿತ್ತಿಪತ್ರ ಪ್ರದರ್ಶಿಸಲಾಯಿತು.  

- Advertisement -