ಕೋವಿಡ್-19 ಲಸಿಕೆ ಪ್ರಯೋಗ: 20 ರಾಷ್ಟ್ರಗಳ 10,000 ಸದಸ್ಯರು ಸ್ವಯಂ ಸೇವಕರಾಗಿ ನೋಂದಣಿ

Prasthutha|

ಅಬುಧಾಬಿ: ಮೂರನೇ ಹಂತದ 42 ದಿನಗಳ ಕೋವಿಡ್ 19 ಲಸಿಕೆ ಪ್ರಯೋಗಕ್ಕೆ ಅಬುಧಾಬಿಯಲ್ಲಿ 20 ರಾಷ್ಟ್ರಗಳಿಗೆ ಸೇರಿದ ಸುಮಾರು 10,000 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನೋಂದಾಯಿತ ಸ್ವಯಂ ಸೇವಕರು ಇಲ್ಲಿನ ಆರೋಗ್ಯ ಸೇವೆಗಳ ಕಂಪೆನಿ (ಸೇಹಾ) ನಿರ್ವಹಿತ ಪರೀಕ್ಷಾ ಕೇಂದ್ರಗಳಿಗೆ ಈ 42 ದಿನಗಳ ಅವಧಿಯಲ್ಲಿ 17 ಬಾರಿ ಸತತ ಭೇಟಿ ನೀಡಬೇಕು ಎಂದು ಅಬುಧಾಬಿ ಆರೋಗ್ಯ ಇಲಾಖೆ ತಿಳಿಸಿದೆ.

ಅಬುಧಾಬಿ ಆರೋಗ್ಯ ಇಲಾಖೆ ಮತ್ತು ಇಲ್ಲಿನ ಮೂಲದ ಕಂಪೆನಿಯೊಂದರ ಸಹಯೋಗದೊಂದಿಗೆ ಚೀನಾ ಮೂಲದ ಔಷಧಿ ಕಂಪೆನಿಯು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ ಒ) ಪಟ್ಟಿ ಮಾಡಿರುವ ಲಸಿಕೆ ಪ್ರಯೋಗ ಇದಾಗಿದೆ. ಆರೋಗ್ಯ ಇಲಾಖೆ ಅಧ್ಯಕ್ಷ ಶೇಖ್ ಅಬ್ದುಲ್ಲಾ ಬಿನ್ ಮುಹಮ್ಮದ್ ಅಲ್ ಹಮೀದ್ ಪ್ರಪ್ರಥಮ ಸ್ವಯಂ ಸೇವಕರಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಕಳೆದ ವಾರ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.

- Advertisement -

ಈ ಲಸಿಕೆ ಪ್ರಯೋಗದಲ್ಲಿ ಭಾಗಿಯಾದ ಸ್ವಯಂ ಸೇವಕರು ಯಾವುದೇ ಕಾರಣಕ್ಕೆ 42 ದಿನಗಳ ಕಾಲ ಯುಎಇ ಬಿಟ್ಟು ತೆರಳುವಂತಿಲ್ಲ. ಅವರು ಸ್ಥಳೀಯ ಕ್ಲಿನಿಕ್ ಗಳ ಸಂಪರ್ಕಕ್ಕೆ ಸುಲಭವಾಗಿ ಲಭ್ಯವಾಗುವಂತಿರಬೇಕು. ಇದಾದ ಬಳಿಕ ಸುಮಾರು 6 ತಿಂಗಳ ಕಾಲ ಇವರು ದೂರವಾಣಿ ಸಮಾಲೋಚನೆ ಮೂಲಕ ಸಂಪರ್ಕದಲ್ಲಿರಬೇಕು. ಆ ನಂತರ ವಿಜ್ಞಾನಿಗಳ ತಂಡವೊಂದು ಈ ಪ್ರಯೋಗದ ಫಲಿತಾಂಶವನ್ನು ವಿಶ್ಲೇಷಿಸಲಿದೆ ಮತ್ತು ಇದರ ಪ್ರಗತಿಯ ಮಾಹಿತಿ ನೀಡಲಿದೆ. 20 ಭಿನ್ನ ದೇಶಗಳ ಸದಸ್ಯರು ಈ ಪ್ರಯೋಗದಲ್ಲಿ ಭಾಗಿಯಾಗುತ್ತಿರುವುದರಿಂದ ಜಗತ್ತಿನಾದ್ಯಂತ ಈ ಲಸಿಕೆಯ ಯಶಸ್ವಿಯ ಸಾಧ್ಯತೆಯನ್ನು ಹೆಚ್ಚು ನಿಖರವಾಗಿ ತಿಳಿಯಲು ಸಾಧ್ಯ ಎಂದು ಹೇಳಲಾಗಿದೆ.

- Advertisement -