ಕೋವಿಡ್ – 19 ಮಾರ್ಗಸೂಚಿ ಪಾಲಿಸದೆ ಸಾರ್ವಜನಿಕರಿಗೆ ಸಂಕಷ್ಟ: ಪಕ್ಷಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಅಸಮಾಧಾನ

Prasthutha|

ನವದೆಹಲಿ : ತಾನು ನೀಡಿರುವ ಕೋವಿಡ್ – 19 ಮಾರ್ಗಸೂಚಿಗಳನ್ನು ಪಾಲಿಸದೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಮತ್ತು ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅ.28 ಮತ್ತು ನ.7ರಂದು ಬಿಹಾರದಲ್ಲಿ ನಡೆಯುವ ಚುನಾವಣೆಗಳಿಗೆ ಸಂಬಂಧಿಸಿ ಚುನಾವಣಾ ಆಯೋಗವು ಆಗಸ್ಟ್ ನಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ರ್ಯಾಲಿಗಳಿಗೆ ವಿಶಾಲ ಪ್ರದೇಶವನ್ನು ಆಯ್ದುಕೊಳ್ಳುವುದು, ಆನ್ ಲೈನ್ ಸಂವಾದಗಳನ್ನು ನಡೆಸುವುದು, ಕಡಿಮೆ ಜನರೊಂದಿಗೆ ನಾಮಪತ್ರ ಸಲ್ಲಿಸುವುದು, ಚುನಾವಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು ಮುಂತಾದ ನಿಯಮಗಳನ್ನು ಪಾಲಿಸಲು ಆಯೋಗ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿತ್ತು.

- Advertisement -

ಸಭೆಗಳಲ್ಲಿ ದೊಡ್ಡ ಸಂಖ್ಯೆಯ ಜನರು ಸಾಮಾಜಿಕ ಅಂತರವಿಲ್ಲದೆ ಭಾಗವಹಿಸುತ್ತಿರುವುದು ಮತ್ತು ಮುಖಂಡರು ಮಾಸ್ಕ್ ಧರಿಸದೆ ಮಾತನಾಡುತ್ತಿರುವುದಕ್ಕೆ ಸಂಬಂಧಿಸಿ ಆಯೋಗವು ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡಿದೆ.

- Advertisement -