ಕೋವಿಡ್ ಸೋಂಕಿನ ಸೇವೆಗೆ ತಮ್ಮ ಪ್ರಾಣ ಪಣವಿಟ್ಟ ವೈದ್ಯರಿಗೆ ವೇತನ ನೀಡದಿರುವುದು ನಾಚಿಕೆಗೇಡು : ಕೇಜ್ರಿವಾಲ್

ನವದೆಹಲಿ : ಕೋವಿಡ್ – 19 ಸೇವೆಯಲ್ಲಿ ನಿರತರಾಗಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನಡೆಸುವ ಆಸ್ಪತ್ರೆಗಳ ವೈದ್ಯರಿಗೆ ವೇತನ ಬಿಡುಗಡೆ ಮಾಡದಿರುವುದು ನಾಚಿಕೆಗೇಡು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ವೈದ್ಯರ ವೇತನ ನೀಡಲು ತಕ್ಷಣವೇ ಅನುದಾನ ಬಿಡುಗಡೆ ಮಾಡುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಕೋವಿಡ್ ಸೋಂಕಿನ ಸಂದರ್ಭ ಕಠಿಣ ಸೇವೆ ಸಲ್ಲಿಸುತ್ತಿದ್ದರೂ, ಮೂರು ತಿಂಗಳಿನಿಂದ ವೇತನ ಪಾವತಿಸಿಲ್ಲ ಎಂದು ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ವೈದ್ಯರು ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

- Advertisement -

“ಕೋವಿಡ್ ಸೋಂಕಿನ ಸಂದರ್ಭ ನಮ್ಮ ಸೇವೆಗಾಗಿ ತಮ್ಮ ಪ್ರಾಣವನ್ನು ಪಣವಿಟ್ಟ ವೈದ್ಯರು, ವೇತನಕ್ಕಾಗಿ ಪ್ರತಿಭಟನೆ ನಡೆಸುವಂತಾಗಿರುವುದಕ್ಕೆ ನನಗೆ ನೋವಾಗಿದೆ’’ ಎಂದು ಕೇಜ್ರಿವಾಲ್ ಅಭಿಪ್ರಾಯ ಪಟ್ಟಿದ್ದಾರೆ.  

- Advertisement -