ಕೊರೋನಾ ಪೀಡಿತ ಟ್ರಂಪ್ ಆಸ್ಪತ್ರೆಗೆ

Prasthutha|

ಕೊರೋನಾ ವೈರಸ್ ಪೀಡಿತರಾಗಿರುವ ಮತ್ತು ಸಹಾಯಕರ ಪ್ರಕಾರ ಕೆಮ್ಮು ಹಾಗೂ ರಕ್ತನಿಬಿಡತೆಗೆ ಒಳಗಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಶುಕ್ರವಾರದಂದು ಆಸ್ಪತ್ರೆಗೆ ಸೇರಿಸಲಾಗಿದೆ. ಇದರೊಂದಿಗೆ ಚುನಾವಣೆಗೆ ಕೇವಲ 32 ದಿನಗಳು ಬಾಕಿಯುಳಿದಿರುವಂತೆ ರಾಷ್ಟ್ರದ ನಾಯಕತ್ವವು ಅನಿಶ್ಚಿತತೆ ಮತ್ತು ಅಸ್ಥಿರತೆಗೆ ಸಿಲುಕಿದೆ.

ಟ್ರಂಪ್ ರನ್ನು ವಾಲ್ಟರ್ ರೀಡ್ ನ್ಯಾಶನಲ್ ಮಿಲಿಟರಿ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗಿದೆ. ಟ್ರಂಪ್ ‘ಲಘು ಲಕ್ಷಣ”ಗಳನ್ನು ಹೊಂದಿದ್ದಾರಷ್ಟೆ ಎಂದು ವೈಟ್ ಹೌಸ್ ಹೇಳಿದ್ದರೂ ಅವರ ಜ್ವರ ಮತ್ತು ಇತರ ಲಕ್ಷಣಗಳು ತೀವ್ರವಾಗುತ್ತಿದೆ ಎಂದು ಅವರ ಹತ್ತಿರದ ಮೂಲಗಳು ತಿಳಿಸಿವೆ.

- Advertisement -

ಯಾವಾಗಲೂ ಕ್ರಿಯಾಶೀಲರಾಗಿರುವ ಟ್ರಂಪ್ ಸಾರ್ವಜನಿಕ ವೀಕ್ಷಣೆಯಿಂದ ಸಂಪೂರ್ಣ ದೂರವಾಗಿದ್ದಾರೆ. ಕೊನೆಯ ನಿಮಿಷದಲ್ಲಿ ಗವರ್ನರ್ ಗಳೊಂದಿಗಿನ ಕರೆಯನ್ನು ನಿಲ್ಲಿಸಿದ್ದಾರೆ ಮತ್ತು ಟ್ವಿಟ್ಟರ್ ನಿಂದ ದೂರವುಳಿದಿದ್ದಾರೆ.

- Advertisement -