ಕೊರೊನಾ ರೋಗಿಗಳಿಗಾಗಿ ವೈದ್ಯಕೀಯ ಐಸೊಲೇಶನ್ ಬೆಡ್ ನಿರ್ಮಿಸಿದ ಡಿಐಎಟಿ

Prasthutha News

ಪುಣೆ : ಕೊರೊನಾ ವಿರುದ್ಧ ಹೋರಾಡಲು ಇಲ್ಲಿನ ಸುಧಾರಿತ ತಂತ್ರಜ್ಞಾನದ ರಕ್ಷಣಾ ಸಂಸ್ಥೆ (ಡಿಐಎಟಿ) “ಆಶ್ರಯ್’’ ಎಂಬ ವೈದ್ಯಕೀಯ ಪ್ರತ್ಯೇಕತೆ ವ್ಯವಸ್ಥೆಯ ಹಾಸಿಗೆ(ಮೆಡಿಕಲ್ ಐಶೊಲೇಶನ್ ಬೆಡ್)ಯನ್ನು ಸಂಶೋಧಿಸಿದೆ. ಈ ಕುರಿತು ರಕ್ಷಣಾ ಇಲಾಖೆಯ ಪುಣೆ ಪಿಆರ್ ಒ ಮಾಹಿತಿ ನೀಡಿದ್ದಾರೆ.

ಈ ಹಾಸಿಗೆ ಕಡಿಮೆ ಬೆಲೆಯದ್ದಾಗಿದ್ದು, ಪುನರ್ ಬಳಕೆಗೆ ಯೋಗ್ಯವಾಗಿದೆ. ಕೊರೊನಾ ರೋಗಿಗಳಿಗೆ ಇದರಿಂದ ಸೂಕ್ತ ಪ್ರತ್ಯೇಕಿತ ವ್ಯವಸ್ಥೆಯನ್ನು ಕಲ್ಪಿಸಬಹುದಾಗಿದೆ.

ವೈದ್ಯಕೀಯ ಸಲಕರಣೆಗಳನ್ನು ಬಳಸಿಕೊಂಡು ಈ ಐಸೊಲೇಶನ್ ಹಾಸಿಗೆಗಳನ್ನು ರಚಿಸಲಾಗಿದೆ. ಇದು ಆಸ್ಪತ್ರೆ, ಸಂಸ್ಥೆಗಳು, ಮನೆಗಳಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವವರಿಗೆ ಬಳಸಬಹುದಾದ ವಿವಿಧ ಅಗತ್ಯ ವ್ಯವಸ್ಥೆಗಳನ್ನು ಹೊಂದಿದೆ. ಹಾಸಿಗೆಯ ಸುತ್ತದ ಜಾಗವನ್ನು ಕೋಣೆಯ ವಿಸ್ತಾರದ ಅಗತ್ಯಕ್ಕೆ ಅನುಗುಣವಾಗಿ ವಿಸ್ತರಿಸಬಹುದಾದ ವ್ಯವಸ್ಥೆಯಿದೆ. ಇದರಲ್ಲಿ ಹಾಸಿಗೆ, ಟೇಬಲ್, ಕುರ್ಚಿಯಿದ್ದು, ಅತ್ತಿತ್ತ ನಡೆಯಲು ಬೇಕಾದಷ್ಟು ಜಾಗವಿದೆ. ಹಾಸಿಗೆಯ ಸುತ್ತ ಕೆಳಗಿನ ಮೂರು ಅಡಿ ಕಾಣದಂತೆ ವ್ಯವಸ್ಥೆಗೊಳಿಸಲಾಗಿದ್ದು, ಇದು ರೋಗಿಗಳ ಖಾಸಗಿತನಕ್ಕೆ ಉಪಯುಕ್ತವಾಗಿದೆ.


Prasthutha News

Leave a Reply

Your email address will not be published. Required fields are marked *