ಕೊರೊನಾ ನೆಗೆಟಿವ್ ಇದ್ದರೆ, ವಿದೇಶದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇಲ್ಲ

Prasthutha|

ಮಂಗಳೂರು : ವಿದೇಶದಿದಂ ರಾಜ್ಯಕ್ಕೆ ವಾಪಾಸ್ ಆಗಮಿಸುವವರಲ್ಲಿ ಕೊರೊನಾ ಸೋಂಕಿನ ಲಕ್ಷಣದಿದ್ದಲ್ಲಿ, ಅವರಿಗೆ ಸಾಂಸ್ಥಿಕ ಕ್ವಾರಂಟೈನ್ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದೆ. ವಿಷಯಕ್ಕೆ ಸಂಬಂಧಿಸಿದ ಕ್ವಾರಂಟೈನ್ ಮಾರ್ಗಸೂಚಿಯನ್ನು ಸರ್ಕಾರ ಬದಲಿದ್ದು, ಸಾಂಸ್ಥಿಕ ಕ್ವಾರಂಟೈನ್ ಬದಲು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಗಾಗಲು ನಿರ್ದೇಶಿಸಲಾಗಿದೆ.

- Advertisement -

ಈ ಹಿಂದೆ ವಿದೇಶದಿಂದ ಬಂದವರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು ಏಳು ದಿನಗಳ ಹೋಂ ಕ್ವಾರಂಟೈನ್ ಗೆ ಒಳಗೊಳ್ಳುವಂತೆ ನಿರ್ದೇಶನವಿತ್ತು.

ಇದೀಗ ವಿದೇಶದಂದಿ ವಾಪಾಸದವರಿಗೆ ಜ್ವರ, ಶೀತ, ಕೆಮ್ಮು ಮುಂತಾದ ಕೊರೊನಾ ಲಕ್ಷಣಗಳಿಲ್ಲದಿದ್ದಲ್ಲಿ, ಅವರಿಗೆ ರ್ಯಾಪಿಡ್ ಟೆಸ್ಟ್ ಮಾಡಿಸಿ, ಕೊರೊನಾ ಪಾಸಿಟಿವ್ ಆದರೆ ಮಾತ್ರ ಹೋಂ ಐಸೊಲೇಶನ್ ಅಥವಾ ಆಸ್ಪತ್ರೆ ದಾಖಲಾಗಬೇಕು. ನೆಗೆಟಿವ್ ವರದಿ ಬಂದರೆ, 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯ ಒಳಗಾಗಬೇಕು. ಒಂದು ವೇಳೆ ಹೋಂ ಕ್ವಾರಂಟೈನ್ ಸಾಧ್ಯವಿಲ್ಲದಿದ್ದಲ್ಲಿ, ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಬೇಕು ಮುಂತಾದ ನಿರ್ದೇಶನಗಳನ್ನು ನೀಡಲಾಗಿದೆ.

- Advertisement -

ಇನ್ನು ಅಲ್ಪ ಕಾಲದ ಅವಧಿ ಪ್ರಯಾಣಕ್ಕೆ ಆಗಮಿಸುವವರು ಕೊರೊನಾ ನೆಗೆಟಿವ್ ವರದಿ ನೀಡಬೇಕು. ಎಲ್ಲ ಪ್ರಯಾಣಿಕರು ಯಾತ್ರಿ ಕರ್ನಾಟಕ ಆನ್ ಲೈನ್ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.