ಕೇರಳ | ಅಬ್ದುಲ್ ಕಲಾಂ ಪ್ರತಿಮೆಯನ್ನು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಯ ನಿಗೂಢ ಸಾವು

Prasthutha|

ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಪುಷ್ಪಗಳಿಂದ ಅಲಂಕಾರ ಮಾಡುತ್ತಿದ್ದ ಕೇರಳದ ಅನಾಥ ಶಿವದಾಸನ್(63) ಶವ ನಿಗೂಢವಾಗಿ ಪತ್ತೆಯಾಗಿರುವುದು ವರದಿಯಾಗಿದೆ.

ಬೀದಿ ಬದಿಯಲ್ಲಿ ವಾಸಿಸುತ್ತಿದ್ದ ಶಿವದಾಸನ್ ಅಬ್ದುಲ್ ಕಲಾಂ ಅವರ ಪ್ರತಿಮೆಯನ್ನು ಸ್ವಚ್ಛ ಮಾಡಿಯೇ ಕೇರಳದಲ್ಲಿ ಜನಪ್ರಿಯತೆ ಗಳಿಸಿದ್ದರು. ಇದೀಗ ಅವರು ಕೊಚ್ಚಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

- Advertisement -

ಅವರ ದೇಹದ ಮೇಲೆ ಗಾಯದ ಗುರುತುಗಳನ್ನು ಗಮನಿಸಿದ ಪೊಲೀಸರು ಶಿವದಾಸನ್ ಜನಪ್ರಿಯತೆ ಸಹಿಸಲಾಗದೇ ಯಾರೋ ಅವರ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.

- Advertisement -