October 24, 2020

ಕೇಂದ್ರದಿಂದ 6,500 ಕೋಟಿ ರೂ. ಮೊತ್ತದ ಚಕ್ರಬಡ್ಡಿ ಮನ್ನಾಕ್ಕೆ ನಿರ್ಧಾರ

ನವದೆಹಲಿ : ಬಿಹಾರ ಚುನಾವಣೆಯ ನಡುವೆ, ಕೇಂದ್ರ ಸರಕಾರವು ರೂ. 2 ಕೋಟಿ ವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಿದೆ. ಇದರಿಂದ ಕೇಂದ್ರ ಸರಕಾರಕ್ಕೆ 6,500 ಕೋಟಿ ಹೊರೆಯಾಗುವ ನಿರೀಕ್ಷೆಯಿದೆ. ಮಾ.1ರಿಂದ ಆ.31ರ ವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಗೆ ಮಾತ್ರ ಅನ್ವಯಿಸುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಂಎಸ್ ಎಂಇ ಸಾಲ, ಶಿಕ್ಷಣ ಸಾಲ, ಗೃಹ ಸಾಲ, ಗ್ರಾಹಕ ಬಳಕೆ ವಸ್ತುಗಳು ಖರೀದಿಗೆ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ, ವಾಹನ ಸಾಲ, ವೈಯಕ್ತಿಕ ಸಾಲ, ಉಪಭೋಗದ ಸಾಲ ಪಡೆದವರಿಗೆ ಇದು ಅನ್ವಯವಾಗಲಿದೆ.
ಅ.14ರ ವಿಚಾರಣೆಯ ವೇಳೆ ಶೀಘ್ರವೇ ಚಕ್ರಬಡ್ಡಿ ಮನ್ನಾ ಮಾಡುವಂತೆ ಸರಕಾರಕ್ಕೆ ಸುಪ್ರೀಂ ಕೊರ್ಟ್ ನಿರ್ದೇಶಿಸಿತ್ತು.

ಟಾಪ್ ಸುದ್ದಿಗಳು