ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ
ಬೈಕ್ ನಲ್ಲಿದ್ದ ಮೂವರು ಸಾವು

Prasthutha|

ಬೆಳಗಾವಿ,ಮಾ.19-ವೇಗವಾಗಿ ಬಂದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ರಾಯಭಾಗ ತಾಲೂಕಿನ ಕುಡಚಿ ಸಮೀಪ ನಡೆದಿದೆ.
ಹಾಳಸಿರಬೂರ ಗ್ರಾಮದ ಭಗವಂತ ಶಿವರಾಯ ಕಾಂಬಳೆ (45), ವಿಶ್ವನಾಥ್ ಶ್ರೀಮತಿ ಕಾಂಬಳೆ (24), ಕುಮಾರ ಬಾಳಪ್ಪ ಕಾಂಬಳೆ (35) ಮೃತ ದುರ್ದೈವಿಗಳು.
ಬಸ್​ ಡಿಕ್ಕಿಯಾದ ತೀವ್ರತೆಗೆ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಯಿಂದ ಬಾಗಲಕೋಟೆ ಜಿಲ್ಲೆ ಬಾದಾಮಿಗೆ ಹಾರುಗೇರಿ ಮಾರ್ಗವಾಗಿ ಹೊರಟಿರುವ ಬಸ್​ಗೆ ಏಕಾಏಕಿ ಬೈಕ್ ಸವಾರರು ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

- Advertisement -