Home ಟಾಪ್ ಸುದ್ದಿಗಳು ‘ಕುರ್ಚಿ ಉಳಿಸಿಕೊಳ್ಳಲು ಲಾಕ್ಡೌನ್ ದುರ್ಬಳಕೆ ಮಾಡಬೇಡಿ’ : ಯತ್ನಾಳ್ ಆಕ್ರೋಶ

‘ಕುರ್ಚಿ ಉಳಿಸಿಕೊಳ್ಳಲು ಲಾಕ್ಡೌನ್ ದುರ್ಬಳಕೆ ಮಾಡಬೇಡಿ’ : ಯತ್ನಾಳ್ ಆಕ್ರೋಶ

ವಿಜಯಪುರ : ಅಧಿಕಾರವನ್ನು ಉಳಿಸಿಕೊಳ್ಳುವ ರಾಜಕೀಯ ಸ್ವಾರ್ಥಕ್ಕಾಗಿ ಕೋವಿಡ್ ಕರ್ಫ್ಯೂ ದುರ್ಬಳಕೆ ಮಾಡಬೇಡಿ. ರೋಗ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಕರ್ಫ್ಯೂ ಹಿಂಪಡೆಯಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ.

 ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜೂ.7ಕ್ಕೆ ಕೊನೆಗೊಳ್ಳಲಿದೆ. ನಂತರ ಕರ್ಫ್ಯೂ ವಿಸ್ತರಣೆ ಅಗತ್ಯವೇ ಎಂಬ ಚರ್ಚೆಯೇ ಅಪ್ರಸ್ತುತ. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಕರ್ಫ್ಯೂ ಹಿಂಪಡೆಯಬೇಕು ಎಂದು ಶಾಸಕ ಯತ್ನಾಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಮೇ 7 ರ ಬಳಿಕವೂ ಕರ್ಫ್ಯೂ ಮುಂದುವರಿಕೆ ಬೇಡ. ರೋಗ ನಿಯಂತ್ರಣ ಆಗಿರುವ ಜಿಲ್ಲೆಗಳಲ್ಲಿ ವಿಧಿಸಿದ ಕರ್ಫ್ಯೂ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಬಡ-ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಜೀವನ ನಿರ್ಹಣೆಗೆ ಪರದಾಡುತ್ತಿರುವುದರಿಮದಾಗಿ ಉದ್ಯೋಗ ಸೃಷ್ಟಿಗೂ ಸರ್ಕಾರ ಪರ್ಯಾಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Join Whatsapp
Exit mobile version