ಕಿಸಾನ್ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದ ಟ್ರ್ಯಾಕ್ಟರ್ ಮೆಕ್ಯಾನಿಕ್ ಜೀವಂತ ದಹನ|

Prasthutha|

ಚಂಡೀಗಡ: ಕೇಂದ್ರ ಸರಕಾರ ಜಾರಿಗೊಳಿಸಿದ್ದ ನೂತನ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಸ್ವಯಂ ಬೆಂಬಲ ವ್ಯಕ್ತಪಡಿಸಲು ದಿಲ್ಲಿ-ಹರಿಯಾಣ ಗಡಿಗೆ ತೆರಳಿದ್ದ ಪಂಜಾಬ್ ನ ಜನಕ್ ರಾಜ್(55), ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಕಾರು ಬೆಂಕಿಗಾಹುತಿಯಾಗಿ ಜೀವಂತ ದಹನವಾಗಿರುವ ಘಟನೆಯೊಂದು ವರದಿಯಾಗಿದೆ.

ಜನಕ್ ರಾಜ್ ಅವರು ಬರ್ನಾಲಾ ಜಿಲ್ಲೆಯ ಧನೋಲುವಾ ಗ್ರಾಮದ ನಿವಾಸಿಯಾಗಿದ್ದರು. ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿದ್ದ ಅವರು ರೈತರು ಬಳಸುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಸ್ವಯಂ ಪ್ರೇರಣೆಯಿಂದ ರಿಪೇರಿ ಮಾಡಲು ದಿಲ್ಲಿಗೆ ತೆರಳಿದ್ದರು. ದಿಲ್ಲಿ-ಹರಿಯಾಣ ಗಡಿಯಲ್ಲಿ ತಡರಾತ್ರಿ ತನಕ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ಅವರು ಕಾರಿನೊಳಗೆ ನಿದ್ರಿಸಿದ್ದರು. ಈ ಸಂದರ್ಭ ಕಾರಿಗೆ ಬೆಂಕಿ ಬಿದ್ದ ಪರಿಣಾಮ ಜೀವಂತ ದಹನವಾದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ರಾಜ್ ಅವರ ನಿಧನದ ಸುದ್ದಿ ಕೇಳಿದ ಶಿರೋಮಣಿ ಅಕಾಲಿದಳ ಪಕ್ಷ ಹಾಗೂ ಸರ್ವ ರೈತ ಸಂಘಟನೆ ಶೋಕ ವ್ಯಕ್ತಪಡಿಸಿದ್ದು, ರೈತ ಚಳವಳಿಯ ಇತಿಹಾಸದಲ್ಲಿ ಅವರ ನಾಮವನ್ನು ಅಮರಗೊಳಿಸಲಾಗುವುದು ಎಂದು ಅಕಾಲಿದಳ ತಿಳಿಸಿದೆ.

- Advertisement -