‘ಕಾಶ್ಮೀರ ಟೈಮ್ಸ್’ ಶ್ರೀನಗರ ಕಚೇರಿ ಮುಟ್ಟುಗೋಲು

Prasthutha|

►►ಎರಡು ತಿಂಗಳ ಹಿಂದೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಅವರ ಫ್ಲ್ಯಾಟ್ ತೆರವು

►►ಸರಕಾರದ ಟೀಕೆಗೆ ಪ್ರತೀಕಾರ | ಯಾವುದೇ ನೋಟಿಸ್ ನೀಡದೆ ದ್ವೇಷಪೂರಿತ ಕ್ರಮದ ಆರೋಪ

- Advertisement -

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಆಡಳಿತ ಪ್ರದೇಶದ ಜನಪ್ರಿಯ ದೈನಿಕ ‘ಕಾಶ್ಮೀರ್ ಟೈಮ್ಸ್’ ಪತ್ರಿಕೆಯ ಶ್ರೀನಗರ ಕಚೇರಿಯನ್ನು ಮುಟ್ಟುಗೋಲು ಹಾಕಿದೆ. ಜಮ್ಮುವಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ‘ಕಾಶ್ಮೀರ್ ಟೈಮ್ಸ್’ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸಾರವಾಗುತ್ತದೆ.

ಸರಕಾರದ ಎಸ್ಟೇಟ್ಸ್ ಇಲಾಖೆ ಅಧಿಕಾರಿಗಳು ಪ್ರೆಸ್ ಎನ್ ಕ್ಲೇವ್ ಪ್ರದೇಶದಲ್ಲಿನ ಪತ್ರಿಕೆಯ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಜಾಗವನ್ನು 1990ರ ದಶಕದಲ್ಲಿ ಪತ್ರಿಕೆಗೆ ಮಂಜೂರು ಮಾಡಲ್ಪಟ್ಟಿತ್ತು.

ಸರಕಾರದ ನೀತಿಗಳ ವಿರುದ್ಧ ಟೀಕೆ ಮಾಡಿರುವುದಕ್ಕೆ ಆಡಳಿತವು ದ್ವೇಷ ಪೂರಿತ ಕ್ರಮ ಕೈಗೊಂಡಿದೆ ಎಂದು ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ಅನುರಾಧ ಭಾಸಿನ್ ಆಪಾದಿಸಿದ್ದಾರೆ. ಮಂಜೂರಾತಿ ರದ್ದತಿ ಅಥವಾ ತೆರವಿನ ಕುರಿತು ಯಾವುದೇ ನೋಟಿಸ್ ತಮಗೆ ನೀಡಿಲ್ಲ ಎಮದು ಅವರು ತಿಳಿಸಿದ್ದಾರೆ.

ಎಸ್ಟೇಟ್ಸ್ ಇಲಾಖೆಯು ಎರಡು ತಿಂಗಳ ಹಿಂದೆ ತಮ್ಮನ್ನು ತಮ್ಮ ಮನೆಯಿಂದಲೂ ಯಾವುದೇ ಸೂಕ್ತ ಪ್ರಕ್ರಿಯೆ ಇಲ್ಲದೆ ತೆರವುಗೊಳಿಸಿದ್ದಾರೆ ಎಂದು ಭಾಸಿನ್ ತಿಳಿಸಿದ್ದಾರೆ. ಜಮ್ಮುವಿನಲ್ಲಿರುವ ತಮ್ಮ ಫ್ಲ್ಯಾಟ್ ನಿಂದ ತಮ್ಮನ್ನು ತೆರವುಗೊಳಿಸಲಾಗಿದೆ. ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳ ಸಹಿತ ನನ್ನ ಎಲ್ಲಾ ವಸ್ತುಗಳನ್ನು ಈಗಿನ ಫ್ಲ್ಯಾಟ್ ನಿವಾಸಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಡಳಿತದ ಕ್ರಮವನ್ನು ಖಂಡಿಸಿ ವಿವಿಧ ಪಕ್ಷಗಳ ಮುಖಂಡರು ಖಂಡಿಸಿದ್ದಾರೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಉಮರ್ ನ್ಯಾಶನಲ್ ಕಾನ್ಫರೆನ್ಸ್ ಅಬ್ದುಲ್ಲಾ ಟ್ವೀಟ್ ಮಾಡಿ, ಇದು ದ್ವೇಷಪೂರಿತ ರಾಜಕಾರಣ ಎಂದು ಬಣ್ಣಿಸಿದ್ದಾರೆ.  

- Advertisement -