ಕಷ್ಟ ಬಂದರೆ ಮಾತ್ರ ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯ; ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಸಚಿವ

Prasthutha: July 11, 2021

ಭೋಪಾಲ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನ ತತ್ತರಿಸಿರುವಾಗಲೇ ಬಿಜೆಪಿ ನಾಯಕರ ಬೇಜವಾಬ್ದಾರಿಯುತ ಹೇಳಿಕೆಗಳು ಜನರನ್ನು ಮತ್ತಷ್ಟು ಆಕ್ರೋಶಕ್ಕೆ ಒಳಗಾಗುವಂತೆ ಮಾಡುತ್ತಿದೆ.


ಮಧ್ಯಪ್ರದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಓಂ ಪ್ರಕಾಶ್ ಸಕ್ಲೇಚಾ ಅವರು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ತಪ್ಪೇನೂ ಇಲ್ಲ, ‘ಸಂಕಷ್ಟವಿದ್ದರೆ ಮಾತ್ರವೇ ನಿಮಗೆ ಸಂತೋಷವನ್ನು ಆನಂದಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.


‘ಸಂಕಷ್ಟಗಳು ನಿಮಗೆ ಒಳ್ಳೆಯ ಕ್ಷಣಗಳ ಸಂತೋಷವನ್ನು ಅರ್ಥಮಾಡಿಸುತ್ತವೆ. ಒಂದು ವೇಳೆ ಯಾವುದೇ ಕಷ್ಟವಿಲ್ಲ ಎಂದಾದರೆ, ನೀವು ಸಂತೋಷವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ’ ಎಂದು ಸಚಿವರು ಹೇಳಿದ್ದಾರೆ.
ದೇಶಾದ್ಯಂತ ತೈಲ ಬೆಲೆ ಏರಿಕೆ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿದ್ದಾರೆ.
ಸಂಪುಟ ಸದಸ್ಯನ ಹೇಳಿಕೆಯಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುಜುಗರ ಪಡುವಂತಾಗಿದೆ.

ಇತ್ತೀಚೆಗೆ ಇಂಧನ ಸಚಿವ ಪ್ರದ್ಯುಮ್ ಸಿಂಗ್ ತೋಮರ್ ಕೂಡ ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು, ನಾವು ಇನ್ನು ಮುಂದೆ ಸೈಕಲ್ ಬಳಸಲು ಈ ಬೆಲೆ ಏರಿಕೆ ಸಹಕಾರಿಯಾಗಿದೆ. ಸೈಕಲ್ ಬಳಕೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ ಎಂದು ಹೇಳಿಕೆ ನೀಡಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ