ಕಳೆದ ವರ್ಷ ರೂ. 2000 ನೋಟು ಮುದ್ರಿಸಿಯೇ ಇಲ್ಲ | ಆರ್ ಬಿಐ

Prasthutha|

ನವದೆಹಲಿ : ಕಳೆದ ಹಣಕಾಸು ವರ್ಷ 2019-20ರಲ್ಲಿ ರೂ. 2000 ನೋಟುಗಳನ್ನು ಮುದ್ರಿಸಿಲ್ಲ ಎಂದು ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ತಿಳಿಸಿದೆ. ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ನೀಡಿದೆ.

2018ರಿಂದ ನಿಧಾನವಾಗಿ ರೂ. 2000ರ ನೋಟುಗಳ ಚಲಾವಣೆ ಕಡಿಮೆಯಾಗಿದೆ ಎಂದೂ ಅದು ತಿಳಿಸಿದೆ. 2018ರ ಮಾರ್ಚ್ ಅಂತ್ಯಕ್ಕೆ ರೂ. 2000 ಮುಖಬೆಲೆಯ 36,632 ಲಕ್ಷ ನೋಟುಗಳು ಕಡಿಮೆಯಾಗಿದ್ದರೆ, 2019ರ ಮಾರ್ಚ್ ಅಂತ್ಯಕ್ಕೆ 39,910 ಲಕ್ಷ ನೋಟುಗಳು ಕಡಿಮೆಯಾಗಿವೆ ಮತ್ತು 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷ ನೋಟುಗಳು ಕಡಿಮೆಯಾಗಿವೆ.

- Advertisement -

ಆದಾಗ್ಯೂ, ಕಳೆದ ಹಣಕಾಸು ವರ್ಷದಲ್ಲಿ ರೂ. 2000ರ ಮುಖಬೆಲೆಯ 2,96,695 ನಕಲಿ ನೋಟುಗಳು ಪತ್ತೆಯಾಗಿವೆ. 2016ರ ನವೆಂಬರ್ 8ರಂದು ಎಲ್ಲ 500 ಮತ್ತು ರೂ. 1000 ನೋಟುಗಳನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದರು. ಈ ವೇಳೆ ಹೊಸ ರೂ. 500 ಮತ್ತು 2000 ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಕಪ್ಪುಹಣ ತರಲು, ನಕಲಿ ನೋಟು ತಡೆಯಲು, ಭಯೋತ್ಪಾದನೆ ನಿಗ್ರಹಕ್ಕಾಗಿ ರೂ. 500 ಮತ್ತು 1000 ನೋಟುಗಳನ್ನು ನಿಷೇಧಿಸಿರುವುದಾಗಿ ಪ್ರಧಾನಿ ಮೋದಿ ಹೇಳಿಕೊಂಡಿದ್ದರು. ಆದರೆ, ಇದರಿಂದ ದೇಶಕ್ಕೆ ಯಾವುದೇ ಪ್ರಯೋಜನಗಳಾದ ಬಗ್ಗೆ ತಿಳಿಯುತ್ತಿಲ್ಲ.

- Advertisement -