‘ಕರ್ನಾಟಕ ಭವನವನ್ನು ನಿಮ್ಮ​ ಬೆಡ್​ ರೂಮ್ ಅಂದುಕೊಂಡಿದ್ದೀರಾ?’ ಬಿಜೆಪಿ ನಾಯಕರಿಗೆ ಕಾಂಗ್ರೆಸ್​ ಪ್ರಶ್ನೆ

Prasthutha|

ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವೀಡಿಯೋ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.  ವೀಡಿಯೋ ದೆಹಲಿಯ ಕರ್ನಾಟಕ ಭವನದಲ್ಲಿ ಮಾಡಿರುವುದರಿಂದ ಬಿಜೆಪಿ ನಾಯಕರು ಕರ್ನಾಟಕ ಭವನವನ್ನು ಬೆಡ್​ ರೂಂ ಅಂದುಕೊಂಡಿದ್ದಾರಾ ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

- Advertisement -

ಉದ್ಯೋಗ ಅರಸಿ ಬರುವ ಯುವಸಮುದಾಯಕ್ಕೆ ನೀವು ಏನನ್ನ ಕೊಡಲು ಹೊರಟಿದ್ದೀರಿ? ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್ ಮಾಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯ ಆವರಣದಲ್ಲಿ ಪೊಲೀಸ್‌ ಅಧಿಕಾರಿಯ ಮೇಲೆಯೇ ಕೈ ಎತ್ತಿದ್ದ ಫೋಟೋವೊಂದನ್ನು ಶೇರ್​ ಮಾಡಿದ್ದ ಬಿಜೆಪಿ, ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳಲು ಪೊಲೀಸರೇನು ಅಂದು ಕಾಂಗ್ರೆಸ್​ ಪಕ್ಷದ ಮನೆಯ ಆಳುಗಳಾಗಿದ್ದರೇ? ಎಂದು ಟ್ವಿಟ್ ಮಾಡಿತ್ತು. ಆ ಟ್ವೀಟ್​ನ್ನು ರಿಟ್ವೀಟ್​ ಮಾಡಿರುವ ಕಾಂಗ್ರೆಸ್​ ದೆಹಲಿಯ ಕರ್ನಾಟಕ ಭವನವನ್ನು ನೀವು ಬೆಡ್​ ರೂಮ್ ಅಂದುಕೊಂಡಿದ್ದೀರಾ? ಎಂದು ಮರುಪ್ರಶ್ನೆ ಕೇಳಿದೆ.

- Advertisement -