ಕರಿಯ ವರ್ಣೀಯರ ಬಗ್ಗೆ ತಾರತಮ್ಯಕಾರಿ ವರದಿ | ಕ್ಷಮೆ ಕೋರಿದ ‘ಕ್ಯಾನ್ಸಸ್ ಸಿಟಿ ಸ್ಟಾರ್’ ಪತ್ರಿಕೆ

Prasthutha|

ವಾಷಿಂಗ್ಟನ್: ಕರಿಯ ವರ್ಣೀಯರ ಬಗ್ಗೆ ದಶಕಗಳಿಂದ ಜನಾಂಗೀಯವಾದಿ, ತಾರತಮ್ಯಕಾರಿ ವರದಿಗಳನ್ನು ಪ್ರಕಟಿಸಿರುವುದಕ್ಕಾಗಿ ಅಮೆರಿಕದ ‘ಕ್ಯಾನ್ಸಸ್ ಸಿಟಿ ಸ್ಟಾರ್’ ಪತ್ರಿಕೆಯ ಸಂಪಾದಕ ಮೈಕ್ ಫನಿನ್ ಪತ್ರಿಕೆಯ ಪರವಾಗಿ ಕ್ಷಮೆಯಾಚಿಸಿದ್ದಾರೆ.

ಸಿ.ಎನ್.ಎನ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾರ್ಜ್ ಫ್ಲಾಯ್ಡ್ ರ ಹತ್ಯೆಯನ್ನು ವಿರೋಧಿಸಿ ಅಮೆರಿಕ ಹಾಗೂ ಜಗತ್ತಿನಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಈ ಘಟನೆಯು ಕರಿಯ ವರ್ಣೀಯರ ಬಗೆಗಿನ ತಮ್ಮ ನಿಲುವನ್ನು ಬದಲಿಸುವಂತೆ ಪತ್ರಿಕೆಯನ್ನು ಪ್ರೇರೇಪಿಸಿದೆ. ದಶಕಗಳ ಕಾಲ ಕರಿಯ ವರ್ಣೀಯರ ಬಗ್ಗೆ ಪತ್ರಿಕೆಯು ಹೇಗೆ ವರದಿ ಮಾಡಿತೆನ್ನುವುದನ್ನು ತಿಳಿಯಲು ನಾವೆಂದೂ ಪ್ರಯತ್ನಿಸಲಿಲ್ಲ” ಎಂದು ಫನಿನ್  ಹೇಳಿದ್ದಾರೆ.

- Advertisement -

“ತನ್ನ ಆರಂಭಿಕ ಇತಿಹಾಸದ ಹೆಚ್ಚಿನ ಅವಧಿಯಲ್ಲಿ, ಪತ್ರಿಕೆಯು ಕ್ಯಾನ್ಸಸ್ ನ ಕರಿಯ ನಾಗರಿಕರ ತಲೆಮಾರುಗಳನ್ನು ಹಕ್ಕುವಂಚಿತರನ್ನಾಗಿಸಿದ್ದು, ಅವರನ್ನು ನಿರ್ಲಕ್ಷಿಸಿದೆ” ಎಂದು ಅವರು ಹೇಳಿದರು.

ಜಾರ್ಜ್ ಫ್ಲಾಯ್ಡ್ ಹತ್ಯೆಯ ವಿರೋಧಿ ಪ್ರತಿಭಟನೆಗಳ ಬಳಿಕ, ಅಮೆರಿಕವು ತನ್ನ ಗುಲಾಮಗಿರಿ ಮತ್ತು ಜನಾಂಗೀಯ ತಾರತಮ್ಯ ಧೋರಣೆಯ ಇತಿಹಾಸದತ್ತ ತಿರುಗಿ ನೋಡುತ್ತಿದೆ.

- Advertisement -