ಕರಾವಳಿ: ಅಡಿಕೆಗೆ ದಾಖಲೆ ಬೆಲೆ

Prasthutha News

ಮಂಗಳೂರು: ಅಡಿಕೆ ಮಾರುಕಟ್ಟೆಯಲ್ಲಿ ದಿಢೀರ್ ಅಡಿಕೆ ಬೆಲೆ ಏರಿಕೆ ಕಂಡಿರುವುದು ಅಡಿಕೆ ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಹೊಸ ಅಡಿಕೆ, ಹಳೆಯ ಅಡಿಕೆ, ಡಬಲ್ ಚೋಲ್ ಅಡಿಕೆ ಬೆಲೆಯಲ್ಲಿ ಹೆಚ್ಚಳ ಕಂಡಿದೆ.

ಶುಕ್ರವಾರದಂದು ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಬೆಲೆ ರೂ.330, ಹಳೆಯ ಅಡಿಕೆ ರೂ 400, ಡಬಲ್ ಚೋಲ್ ಬೆಳೆ 410ಕ್ಕೆ ಏರಿದೆ. ಗುರುವಾರದಂದು ಹೊಸ ಅಡಿಕೆಗೆ ರೂ.300 ಮತ್ತು ಹಳೆಯ ಅಡಿಕೆಗೆ ರೂ.383 ಹಾಗೂ ಡಬಲ್ ಚೋಲ್ ಗೆ ರೂ 400 ಮಾರುಕಟ್ಟೆ ಬೆಲೆಯಿತ್ತು. ಅಡಿಕೆಗೆ ಇಷ್ಟೊಂದು ದಾಖಲೆ ಬೆಲೆ ದೊರೆತಿರುವುದು ಇದೇ ಮೊದಲು ಎನ್ನಲಾಗಿದೆ.

ಖಾಸಗಿ ವಲಯದಲ್ಲೂ ಅಡಿಕೆ ಬೆಲೆ ಏರಿಕೆಯಾಗಿದ್ದು, ಕ್ಯಾಂಪ್ಕೊ ಈ ವಾರದಲ್ಲಿ ಹೊಸ ಅಡಿಕೆಗೆ ರೂ.40, ಡಬಲ್ ಚೋಲ್ ಗೆ ರೂ 10 ಏರಿಕೆ ಮಾಡಿದೆ. ಉತ್ತರ ಭಾರತದಲ್ಲಿ ಅಡಿಕೆ ಬೆಳೆಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ಈ ಹೆಚ್ಚಳ ಕಂಡಿದೆ ಎನ್ನಲಾಗಿದೆ.


Prasthutha News