ಕಡಿಮೆ ವೆಚ್ಚದ ಕೋವಿಡ್ ತಪಾಸಣೆ : ಬರಲಿದೆ ಫೆಲೂದಾ ಟೆಸ್ಟ್ ಕಿಟ್

Prasthutha|

ಕೋವಿಡ್ ಪರೀಕ್ಷೆಗೆ ‘ಪೆಲೂದಾ ಟೆಸ್ಟ್ ಕಿಟ್’ ಮುಂದಿನ ವಾರದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ತಿಳಿಸಿದ್ದಾರೆ.  ಫೆಲೂದಾ ಟೆಸ್ಟ್ ಕಿಟ್ ಅನ್ನು ಕಡಿಮೆ ವೆಚ್ಚದ ಕೋವಿಡ್ ಪರೀಕ್ಷೆಗಾಗಿ ಪರಿಚಯಿಸಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಡೆದ ಸಂವಾದದ ವೇಳೆ ಕೇಂದ್ರ ಆರೋಗ್ಯ ಸಚಿವರು ಈ ಘೋಷಣೆ ಮಾಡಿದ್ದಾರೆ.

ಪೇಪರ್ ಸ್ಟ್ರಿಪ್ ಬಳಸಿ ಫೆಲೋದಾ ಕೋವಿಡ್ ಪರೀಕ್ಷೆಯನ್ನು ದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ನ ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯೋಲಜಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

- Advertisement -

CRISPR ತಂತ್ರಜ್ಞಾನದ ಆಧಾರದ ಮೇಲೆ CSIR ಅಭಿವೃದ್ಧಿಪಡಿಸಿದ ಕೋವಿಡ್ ಪರೀಕ್ಷಾ ಕಿಟ್ ಆಗಿದೆ  FELUDA. ಇದನ್ನು ಟಾಟಾ ಕಾಂಗ್ಲೋಮರೇಟ್ ಕಂಪೆನಿ ತಯಾರಿಸಿದೆ. ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಪರೀಕ್ಷಾ ಕಿಟ್ ತಯಾರಿಸಲು ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಈ ಕಂಪೆನಿಗೆ ಅನುಮತಿ ನೀಡಿತ್ತು.

- Advertisement -