ಒಳಚರಂಡಿ ಕಾರ್ಮಿಕರ ಸಮಸ್ಯೆ ಈಡೇರದಿದ್ದರೆ, ವಿಧಾನಸೌಧ ಚಲೋ ಚಳವಳಿ : ಜಗದೀಶ್ ಪಾಂಡೇಶ್ವರ

Prasthutha|

ಮಂಗಳೂರು : ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ದುಡಿಯುವ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಸುಮಾರು 15 ವರ್ಷಗಳಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಮಂಗಳೂರು ತಾ.ಪಂ. ಮುಂಭಾಗದಲ್ಲಿ ನಡೆಯಿತು.

ಒಳಚರಂಡಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಸಮಸ್ಯೆಗಳಿಗೆ ಪಾಲಿಕೆ, ಜಿಲ್ಲಾಡಳಿತ ಗಮನ ಕೊಡುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಇದೀಗ ಬೇಡಿಕೆ ಈಡೇರದಿದ್ದರೆ, ಮುಂದಿನ ಹಂತದಲ್ಲಿ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ್ ಹೇಳಿದ್ದಾರೆ.

- Advertisement -

ನಗರದಲ್ಲಿ ಮ್ಯಾನ್ ಹೋಲ್ ಸಮಸ್ಯೆ ಎದುರಾದಾಗಲೂ ಒಳಚರಂಡಿ ವಿಭಾಗದ ಕಾರ್ಮಿಕರನ್ನು ಬಳಸಲಾಗುತ್ತದೆ. ಆದರೆ, ಅವರಿಗೆ ಅಗತ್ಯ ಸೌಲಭ್ಯಗಳ ಬಗ್ಗೆ ಆಡಳಿತ ವರ್ಗ ಗಮನ ಹರಿಸುತ್ತಿಲ್ಲ. ಆರೋಗ್ಯ ಸಮಸ್ಯೆಯ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ. ಕಾರ್ಮಿಕರ ಸಮಸ್ಯೆಗೆ ಸ್ಪಂಧಿಸಲು ಸಾಧ್ಯವಾಗದಿದ್ದರೆ, ಅಧಿಕಾರಿಗಳೇ ಕಾರ್ಮಿಕರ ಕೆಲಸ ಮಾಡಲಿ. ಆಗ ಅವರಿಗೆ ಕಾರ್ಮಿಕರ ಕಷ್ಟ ಅರ್ಥವಾದೀತು ಎಂದು ಅವರು ತಿಳಿಸಿದರು.

ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್., ನಾಗೇಶ್ ಮುಲ್ಲಕಾಡು, ಗಂಗಾಧರ ಅದ್ಯಪಾಡಿ, ಶೇಸಪ್ಪ ನೆಕ್ಕಿಲು, ಶ್ರೀಧರ್ ಕಳಂಜೆ, ಚಂದ್ರ ಕಡಂದಲೆ, ನೇಮಿರಾಜ್ ಬೆಳ್ತಂಗಡಿ, ದಯಾನಂದ, ನಾರಾಯಣ ಪಡುಬೆಟ್ಟು, ಚಂದ್ರ ಕುಮಾರ್, ಗಣೇಶ್ ಸೂಟರ್ ಪೇಟೆ, ರಾಜೇಶ್, ಸುನಿಲ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -