ಒಂದೂಕಾಲು ಲಕ್ಷ ಕೋವಿಡ್ ಸೋಂಕಿತರ ಸಾವಿಗೆ ಕಾರಣ ಯಾರು? | ಸದಾನಂದ ಗೌಡಗೆ ಸಿದ್ದರಾಮಯ್ಯ ತಿರುಗೇಟು

Prasthutha|

ಬೆಂಗಳೂರು : ಹೋರಾಟಗಾರ ಮಾರುತಿ ಮಾನ್ಪನೆ ಸಾವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರಣ ಎಂಬ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಕೋವಿಡ್ ನಿಂದ ಸಂಭವಿಸಿರುವ ಒಂದೂಕಾಲು ಲಕ್ಷ ಜನರ ಸಾವಿಗೆ ಯಾರು ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

“ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ. ಶಿವಕುಮಾರ್ ಕಾರಣ ಎಂಬ ಬಾಲಿಶ ಹೇಳಿಕೆಯನ್ನು ಡಿ.ವಿ. ಸದಾನಂದ ಗೌಡ ನೀಡಿದ್ದಾರೆ. ಹಾಗಿದ್ದರೆ, ದೇಶದಲ್ಲಿ ಒಂದೂಕಾಲು ಲಕ್ಷ ಜನ ಕೊರೊನಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಸದಾನಂದ ಗೌಡರೇ?’’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -