November 10, 2020
ಐಪಿಎಲ್ 2020 ಟ್ರೋಫಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ನಲ್ಲಿ 5 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ 2020 ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ದಿಲ್ಲಿ ಕ್ಯಾಪಿಟಲ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಬಾರಿಸಿತ್ತು. ಮುಂಬೈ ಇಂಡಿಯನ್ಸ್ 18.4 ಓವರ್ ಗಳಲ್ಲಿ 157 ರನ್ ಗಳ ಗೆಲುವಿನ ಗುರಿ ತಲುಪುವ ಮೂಲಕ ಟ್ರೋಫಿ ಗೆದ್ದು ಕೊಂಡಿತು.
ಆರ್.ಜಿ.ಶರ್ಮಾ (68) ಮತ್ತು ಇಶನ್ ಕಿಶನ್ (30) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಲು ನೆರವಾದರು.

