ಐದು ಮಹಡಿಯ ವಸತಿ ಸಮುಚ್ಛಯ ಕುಸಿತ | 10 ಮಂದಿ ಸಾವು
Prasthutha: August 25, 2020

ರಾಯ್ ಗಢ : ಮಹಾರಾಷ್ಟ್ರದ ರಾಯ್ ಗಢ ಜಿಲ್ಲೆಯಲ್ಲಿ ವಸತಿ ಸಮುಚ್ಛಯವೊಂದು ಕುಸಿದು ಬಿದ್ದ ಕಾರಣ 10 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 60 ಮಂದಿಯನ್ನು ಇಲ್ಲಿ ವರೆಗೆ ರಕ್ಷಿಸಲಾಗಿದೆ ಮತ್ತು ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಳೆದ 20 ಗಂಟೆಗಳಿಂದ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ರಾಷ್ಟ್ರೀಯ ದುರಂತ ಪ್ರತಿಕ್ರಿಯಾ ಪಡೆಯ ಮೂರು ತಂಡ, ಅಗ್ನಿ ಶಾಮಕ ದಳದ 12 ತಂಡಗಳು ಸ್ಥಳದಲ್ಲಿ ನಿರಂತರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. 10 ವರ್ಷ ಹಳೆಯ 5 ಮಹಡಿಯ ಕಟ್ಟಡ ಕುಸಿದಿದೆ. ಸುಮಾರು 45 ಫ್ಲ್ಯಾಟ್ ಗಳು ಈ ವಸತಿ ಸಮುಚ್ಛಯದಲ್ಲಿದ್ದವು ಎಂದು ವರದಿಯಾಗಿದೆ.
ಫೋಟೊ ಕೃಪೆ : ಇಂಡಿಯನ್ ಎಕ್ಸ್ ಪ್ರೆಸ್
