ಎಲ್ಗಾರ್ ಪರಿಷತ್ ಪ್ರಕರಣ| ಸ್ಟ್ಯಾನ್ ಸ್ವಾಮಿ ಅವರಿಗೆ ಸ್ಟ್ರಾ, ಸಿಪ್ಪರ್ ಕಳುಹಿಸಲು ಮುಂದಾದ ಎನ್.ಪಿ.ಆರ್.ಡಿ
Prasthutha: November 28, 2020

ನವದೆಹಲಿ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಸ್ಟ್ಯಾಂಡ್ ಸ್ವಾಮಿ ಅವರಿಗೆ ಸ್ಟ್ರಾ ಮತ್ತು ಸಿಪ್ಪರ್ ಪೂರೈಸಲು ಅಂಗವಿಕಲರ ಪರ ಹೋರಾಟ ಸಂಸ್ಥೆ ಎನ್.ಪಿ.ಆರ್.ಡಿ ನಿರ್ಧರಿಸಿದೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಅವರು, ಸ್ಟ್ರಾ ಅಥವಾ ಸಿಪ್ಪರ್ ಒದಗಿಸುವಂತೆ ಎನ್.ಐ.ಎ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಎನ್.ಐ.ಎ ಕೋರ್ಟ್, ರಾಷ್ಟ್ರೀಯ ತನಿಖಾ ದಳದ ವಾದವನ್ನು ಆಧರಿಸಿ ಸ್ವಾಮಿ ಅವರ ಅರ್ಜಿಯನ್ನು ತಳ್ಳಿ ಹಾಕಿತ್ತು.
“ಸ್ಟ್ಯಾನ್ ಅವರಿಗೆ ಇನ್ನಷ್ಟು ನೋವನ್ನು ಸಹಿಸಿಕೊಳ್ಳಲಾಗದು. ಅಲ್ಲದೇ ಹೆಚ್ಚು ಕಾಲ ದ್ರವ ಪದಾರ್ಥ ಸೇವಿಸದಂತೆ ನಿರಾಕರಿಸಲು ಕೂಡ ಆಗದು. ಹಾಗಾಗಿ ಸ್ಟ್ರಾ ಮತ್ತು ಸಿಪ್ಪರ್ ಅನ್ನು ತಲೋಜಾ ಜೈಲಿಗೆ ಕಳುಹಿಸುತ್ತಿದ್ದೇವೆ” ಎಂದು ಎನ್.ಪಿ.ಆರ್.ಡಿ ಸೇವಾ ಸಂಸ್ಥೆಯ ಹೇಳಿಕೆ ತಿಳಿಸಿದೆ.
