ಉ.ಪ್ರ. | 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಭೀಕರ ಹಲ್ಲೆ
Prasthutha: August 13, 2020

ಲಖನೌ : ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳಿಗೆ ಪೊಲೀಸರ ಭಯವಿಲ್ಲದಂತಾಗಿದೆ ಎಂಬ ಆರೋಪಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಮನೆ ಹೊರಗೆ ಆಟವಾಡುತ್ತಿದ್ದ ಆರು ವರ್ಷದ ಮಗುವಿನ ಮೇಲ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ, ಭೀಕರ ಹಲ್ಲೆ ನಡೆಸಿದ ಅಮಾನವೀಯ ಘಟನೆ ನಡೆದಿದೆ. ಗದ್ಮುಖ್ತೇಶ್ವರದಲ್ಲಿ ಈ ಘಟನೆಗೆ ಸಂಬಂಧಿಸಿದ ಆರೋಪಿಯ ರೇಖಾಚಿತ್ರವನ್ನು ಈಗ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ರಾತ್ರಿ ಮನೆ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಎತ್ತಿಕೊಂಡು ಹೋಗಿದ್ದ ದುಷ್ಕರ್ಮಿಯು, ಬೆಳಗ್ಗೆ ಕಬ್ಬಿನ ಗದ್ದೆಯಲ್ಲಿ ಆಕೆಯನ್ನು ಎಸೆದು ಹೋಗಿದ್ದ. ಬಾಲಕಿಯ ದೇಹದ ಮೇಲೆಲ್ಲಾ ಗಂಭೀರ ಗಾಯಗಳಾಗಿದ್ದವು.
ಬಾಲಕಿಯನ್ನು ಮೀರತ್ ನ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಪೋಕ್ಸೊ ಮತ್ತು ಹತ್ಯೆಯತ್ನ ಪ್ರಕರಣಗಳನ್ನು ದಾಖಲಿಸಿದ್ದಾರೆ.
