ಉಳ್ಳಾಲ: ತೌಖ್ತೆ ಚಂಡಮಾರುತಕ್ಕೆ ಹಿಂದೂ ರುದ್ರಭೂಮಿ ಸಮುದ್ರ ಪಾಲು

Prasthutha|

ಉಳ್ಳಾಲ: ತೌಖ್ತೆ ಚಂಡಮಾರುತದಿಂದಾಗಿ ಕರಾವಳಿ ಭಾರೀ ಗಾಳಿ ಮಳೆಗಳಿಂದ ಉಳ್ಳಾಲ ಸೋಮೇಶ್ವರ ಸಮುದ್ರ ತೀರದಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಸೋಮೇಶ್ವರ ಬಳಿ ಹಿಂದೂ ರುದ್ರಭೂಮಿ ಸಮುದ್ರ ಪಾಲಾಗಿದೆ.

ಸಮುದ್ರದ ಅಲೆಗಳಿಂದ ಸಮುದ್ರದ ನೀರು ಸುಮಾರು 100 ಮೀಟರ್ ಒಳಗೆ ನುಗ್ಗಿ ಮನೆಗಳು ಜಲಾವೃತವಾಗಿದೆ ಎನ್ನಲಾಗಿದ್ದು, ಸೋಮೇಶ್ವರ ರುದ್ರಪಾದ ಬಳಿ ಇರುವ ಹಿಂದೂ ರುದ್ರಭೂಮಿ ಶುಕ್ರವಾರದ ಅಲೆಗೆ ಸಿಲುಕಿ ತಡೆಗೋಡೆ ಸಮುದ್ರ ಪಾಲಾಗಿತ್ತು. ಶನಿವಾರದ ಸಮುದ್ರದ ಅಲೆಗಳಿಗೆ ಸಂಪೋರ್ಣ ರುದ್ರಭೂಮಿಯೇ ಕುಸಿದು ಬಿದ್ದು ಭಾಗಶ: ಸಮುದ್ರ ಪಾಲಾಗಿದೆ.

- Advertisement -

ಉಚ್ಚಿಲ ಬಟ್ಟಪ್ಪಾಡಿ ಬಳಿಯೂ ಮನೆಗಳು ಅಪಾಯದಲ್ಲಿದ್ದು ಬೃಹತ್ ಗಾತ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದೆ. ಉಳ್ಳಾಲ ಮೊಗವೀರಪಟ್ಣ ಬಳಿ ಬೃಹತ್ ಗಾತ್ರದ ಅಲೆಗಳಿಂದ ಉಂಟಾದ ಸಮುದ್ರದ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತಿದ್ದೆ. ಉಳ್ಳಾಲದ ಕಿಲೇರಿಯಾನಗರ, ಮುಕ್ಜಚ್ಚೇರಿ ಬಳಿ ಮಸೀದಿಯೊಂದು ಅಪಾಯದ ಸ್ಥಿತಿಯಲ್ಲಿದೆ. ಕೋಟೆಪುರ , ಸೀಗ್ರೌಂಡ್ ಬಳಿ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ.

- Advertisement -