ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿಯ ಸಂಬಂಧಿಕನ ಮನೆಯಿಂದ ಹಣದ ಚೀಲ ವಶಕ್ಕೆ ಪಡೆದ ಪೊಲೀಸರು

Prasthutha|

ತೆಲಂಗಾಣ ಉಪಚುನಾವಣೆ ನಡೆಯಲಿರುವ ಡಬ್ಬಾಕ್ ನ ಬಿಜೆಪಿ ಅಭ್ಯರ್ಥಿಯ ಸಂಬಂಧಿಕರ ಮನೆಯಿಂದ 18.67 ಲಕ್ಷ ರೂ ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ಹಣದ ಚೀಲದೊಂದಿಗೆ ಹೊರಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅದನ್ನು ಕಸಿದುಕೊಳ್ಳುವ ದೃಶ್ಯಗಳು ವೈರಲಾಗಿದೆ. ಬಿಜೆಪಿ ಕಾರ್ಯಕರ್ತರು 12 ಲಕ್ಷ ರೂ ಕೊಂಡು ಹೋಗಿದ್ದಾರೆ. ಉಳಿದ 5,87,000 ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಆದರೆ ಪೊಲೀಸರೇ ಅಭ್ಯರ್ಥಿಯ ಸಂಬಂಧಿಯ ಮನೆಗೆ ಹಣವನ್ನು ಕೊಂಡೊಯ್ದಿರುವುದಾಗಿ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುಂಪಿನಿಂದ ಬಂದು ಪೊಲೀಸರ ಕೈಯಿಂದ ಹಣವನ್ನು ದರೋಡೆ ಮಾಡುತ್ತಿರುವುದು ದೃಶ್ಯಗಳಲ್ಲಿ ಕಾಣಬಹುದು.

https://www.youtube.com/watch?v=csEBv70MRFY

ಸಿದ್ದಿಪೇಟೆ ಮುನ್ಸಿಪಲ್ ಅಧ್ಯಕ್ಷರ ಮನೆ ಸೇರಿ ಮೂರು ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ನಡೆದ ಮನೆಗೆ ಭೇಟಿ ನೀಡಲು ಆಗಮಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಾಂದಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ತಡೆದಿದ್ದಾರೆ.

- Advertisement -