ಉಪ ಚುನಾವಣಾ ಸಿದ್ಧತೆಯ ಹಳಿತಪ್ಪಿಸುವ ಯತ್ನ: ಡಿಕೆಶಿ ನಿವಾಸಗಳ ಮೇಲೆ ಸಿಬಿಐ ದಾಳಿ ಕುರಿತು ಸಿದ್ಧರಾಮಯ್ಯ

Prasthutha|

ಬೆಂಗಳೂರು: ಡಿ.ಕೆ.ಶಿವಕುಮಾರ್ ರವರ ನಿವಾಸದ ಮೇಲೆ ನಡೆದಿರುವ ದಾಳಿಯು ಉಪಚುನಾವಣೆಗಳಿಗೆ ನಮ್ಮ ಸಿದ್ಧತೆಯನ್ನು ತಪ್ಪಿಸುವ ಪ್ರಯತ್ನವಾಗಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.

“ಬಿಜೆಪಿ ಯಾವಾಗಲೂ ಸೇಡಿನ ರಾಜಕೀಯದಲ್ಲಿ ತೊಡಗಿಕೊಂಡಿರುತ್ತದೆ ಮತ್ತು ಸಾರ್ವಜನಿಕರ ಗಮನವನ್ನು ತಪ್ಪಿಸಲು ಪ್ರಯತ್ನಿಸುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರ ನಿವಾಸಗಳ ಮೇಲಿನ ದಾಳಿಯು ಉಪಚುನಾವಣೆಗಳಿಗೆ ನಮ್ಮ ತಯಾರಿಯ ಹಳಿತಪ್ಪಿಸುವ ಪ್ರಯತ್ನವಾಗಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.

- Advertisement -

ಡಿ.ಕೆ.ಶಿವಕುಮಾರ್ ನಿವಾಸಗಳ ಮೇಲೆ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರು ಮತ್ತು ಸಹವರ್ತಿಗಳ ಮನೆಗಳ ದಾಳಿಗಳನ್ನು ನಡೆಸಲಾಗುತ್ತಿದ್ದು, ಒಟ್ಟು 14 ಕಡೆ ದಾಳಿಗಳು ನಡೆಯುತ್ತಿದೆ.

ದಾಳಿಗಳ ವೇಳೆ ಒಟ್ಟು 50 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದ ಹಣವರ್ಗಾವಣೆಯ ತನಿಖೆಯ ಕುರಿತು ಇಡಿ ಹಂಚಿದ ಮಾಹಿತಿಗಳ ಆಧಾರದ ಮೇಲೆ ಸಿಬಿಐ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಹಣವರ್ಗಾವಣೆ ತನಿಖೆಯ ವೇಳೆ ಕಳೆದ ವರ್ಷ ಇಡಿ ತನ್ನ ಕೆಲವು ಶೋಧನೆಗಳನ್ನು ಸಿಬಿಐಗೆ ಕಳುಹಿಸಿತ್ತು.

- Advertisement -