ಉಪ್ಪಿನಂಗಡಿ : ಯುವಕರ ಮೇಲೆ ಸಂಘಪರಿವಾರದಿಂದ ತಲವಾರು ದಾಳಿ : ಐವರು ಆಸ್ಪತ್ರೆಗೆ !

Prasthutha: December 5, 2021

ಮಂಗಳೂರು ಸಮೀಪದ ಉಪ್ಪಿನಂಗಡಿ ಬಳಿಯ ಇಳಂತಿಲ ಎಂಬಲ್ಲಿ ಐವರು ಮುಸ್ಲಿಂ ಯುವಕರ ಮೇಲೆ ತಲವಾರು ದಾಳಿ ನಡೆದಿದೆ. ತಲವಾರು ದಾಳಿಗೊಳಗಾಗಿ ಗಾಯಗೊಂಡ ಐದು ಮಂದಿ ಯುವಕರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.

ಗಾಯಗೊಂಡ ಯುವಕರನ್ನು ಝಕರಿಯಾ ಇಳಂತಿಲ, ಸಿದ್ದೀಕ್, ಅಯ್ಯೂಬ್, ಫಯಾಝ್ ಮತ್ತು ಹಫೀಜ್ ಎಂದು ಗುರುತಿಸಲಾಗಿದೆ.

ಸಂಘಪರಿವಾರದಲ್ಲಿ ಗುರುತಿಸಿಕೊಂಡಿರುವ ಜಯರಾಮ್ ಮತ್ತಾತನ ತಂಡ ಈ ತಲವಾರು ದಾಳಿ ನಡೆಸಿದ್ದು ಎನ್ನಲಾಗಿದೆ. ಈ ಹಿಂದೆ ಕೂಡಾ ಈ ಪ್ರದೇಶದಲ್ಲಿ ತಲವಾರು ಝಳಪಿಸಿದ್ದ ಆರೋಪ ಈತನ ವಿರುದ್ಧ ಕೇಳಿ ಬಂದಿದೆ. ಇಳಂತಿಲ ಪ್ರದೇಶದಲ್ಲಿ ಇದ್ದ ಹಫೀಜ್ ಮತ್ತು ಫಯಾಝ್ ಮೇಲೆ ಮೊದಲು ದಾಳಿ ನಡೆಸಿದ್ದ ತಂಡ, ಇವರಿಬ್ಬರು ತಪ್ಪಿಸಿಕೊಂಡ ಬಳಿಕ ಝಕರಿಯಾ, ಸಿದ್ದೀಕ್ ಮತ್ತು ಅಯ್ಯೂಬ್ ಎಂಬ ಮೂವರು ಯುವಕರ ಮೇಲೆ ಮತ್ತೆ ತಲವಾರು ದಾಳಿ ನಡೆಸಿತು ಎನ್ನಲಾಗಿದೆ. ಝಕಾರಿಯಾ, ಸಿದ್ದೀಕ್ ಮತ್ತು ಅಯ್ಯೂಬ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ನಿರಂತರವಾಗಿ ದುಷ್ಕೃತ್ಯಗಳನ್ನು ನಡೆಸುವ ಮೂಲಕ ಗಲಭೆ ನಡೆಸಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದು, ಪೊಲೀಸರ ನಿಷ್ಕ್ರಿಯತೆಯೇ ಇದಕ್ಕೆ ಮೂಲ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!