ಉಪಗ್ರಹಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಾದರೆ ಇವಿಎಂ ಗಳನ್ನೂ ನಿಯಂತ್ರಿಸಬಹುದು : ಕಾಂಗ್ರೆಸ್

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ಪ್ರಗತಿಯಲ್ಲಿರುವಾಗ ಮತದಾನ ಯಂತ್ರದಲ್ಲಿ ಅಕ್ರಮಗಳಾಗಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಉಪಗ್ರಹಗಳನ್ನು ನಿಯಂತ್ರಿಸಬಹುದಾದರೆ ಮತದಾನ ಯಂತ್ರಗಳನ್ನು ಸಹ ನಿಯಂತ್ರಿಸಬಹುದು ಎಂದು ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಆರೋಪಿಸಿದ್ದಾರೆ. ಚಂದ್ರನಿಗೆ ಮತ್ತು ಮಂಗಳ ಗೃಹಕ್ಕೆ ಕಳುಹಿಸಿದ ಉಪಗ್ರಹವನ್ನು ಭೂಮಿಯಲ್ಲಿ ಕುಳಿತು ನಿಯಂತ್ರಿಸಬಹುದಾದರೆ ಇವಿಎಂ ಮೆಷಿನ್ ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಬಿಹಾರದಲ್ಲಿ ಮಹಾ ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ 70 ಸ್ಥಾನಗಳಿಗೆ ಸ್ಪರ್ಧಿಸಿದ್ದರೂ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸುವ ಕಾಂಗ್ರೆಸ್ ನ ನಿರ್ಧಾರವು ಮುಸ್ಲಿಂ ಲೀಗ್ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಮಹಾ ಮೈತ್ರಿಯಲ್ಲಿ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.

- Advertisement -