ಉದ್ರಿಕ್ತರ ಗುಂಪಿನಿಂದ ಅಮಾಯಕರ ಮೇಲಿನ ಹಲ್ಲೆಗೆ ಕಡಿವಾಣ ಹಾಕಲು ಕಾನೂನು ರಚಿಸಿ: ಸುಪ್ರೀಂ ಕೋರ್ಟ್

0
428

ನವದೆಹಲಿ: ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆ, ಹಿಂಸೆಯನ್ನು ನಿಯಂತ್ರಿಸಲು ಹೊಸ ಕಾನೂನು ರಚಿಸುವ ಕುರಿತು ನಿರ್ಣಯ ಕೈಗೊಳ್ಳಬೇಕು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಈ ಬಗ್ಗೆ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಉದ್ರಿಕ್ತರಿಂದ ಅಮಾಯಕರ ಮೇಲಿನ ದಾಳಿ ಪ್ರಕರಣಗಳು ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ‘‘ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು, ಕಾನೂನು ಸುವ್ಯವಸ್ಥೆ ರಕ್ಷಣೆ ರಾಜ್ಯ ಸರಕಾರಗಳ ಹೊಣೆ’’ ಎಂದು ಹೇಳಿದೆ.

ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರವರು, ‘‘ಭಯ ಮತ್ತು ಅರಾಜಕತೆ ಹೆಸರಲ್ಲಿ ಅಮಾಯಕರ ಮೇಲಿನ ದಾಳಿಯನ್ನು ಸಹಿಸಲಸಾಧ್ಯ. ಯಾವುದೇ ಕಾರಣಕ್ಕೂ ಇಂತಹ ಕತ್ಯಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಇಂತಹ ಘಟನೆಗಳ ಕುರಿತು ರಾಜ್ಯ ಸರಕಾರಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆ ರಾಜ್ಯ ಸರಕಾರಗಳ ಹೊಣೆ. ಹೀಗಾಗಿ ಯಾವುದೇ ಕಾರಣಕ್ಕೂ ಹಿಂಸೆಯನ್ನು ಒಪ್ಪಲು ಸಾಧ್ಯವೇ ಇಲ್ಲ’’ ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here