ಉದ್ಯೋಗ ದೊರೆಕದೆ ತರಕಾರಿ ಮಾರುತ್ತಿರುವ ಪಿಎಚ್ ಡಿ ಪದವೀಧರೆ ಮುಸ್ಲಿಮ್ ಯುವತಿ!

Prasthutha|

ಇಂಧೋರ್ : ಭಾರತದಲ್ಲಿ ಯಾವ ಮಟ್ಟದ ಇಸ್ಲಾಮೋಫೋಬಿಯಾ ಹಬ್ಬಿಸಲಾಗುತ್ತಿದೆ ಎಂಬ ಅಂಶ ಈ ಘಟನೆಯಿಂದ ಸ್ಪಷ್ಟವಾಗುತ್ತಿದೆ. ಪಿಎಚ್ ಡಿಯಂತಹ ಪ್ರತಿಷ್ಠಿತ ಪದವಿ, ನಿರರ್ಗಳ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವಿದ್ದರೂ, ಯುವತಿಯೊಬ್ಬರಿಗೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ತರಕಾರಿ ಮಾರುವಂತಹ ಸ್ಥಿತಿ ಬಂದಿದೆ. ಮಧ್ಯಪ್ರದೇಶದ ಇಂಧೋರ್ ನಲ್ಲಿ ತರಕಾರಿ ಮಾರುತ್ತಿದ್ದ ಪಿಎಚ್ ಡಿ ಪದವೀಧರೆ ಮುಸ್ಲಿಂ ಮಹಿಳೆಗೆ, ಅದಕ್ಕೂ ಸಂಕಷ್ಟ ಸೃಷ್ಟಿಯಾಗಿರುವ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿಭಾನ್ವಿತೆಯಾಗಿದ್ದೂ, ಮುಸ್ಲಿಂ ಎಂಬ ಕಾರಣಕ್ಕೆ ಉದ್ಯೋಗ ದೊರಕದೆ, ಬದುಕಿಕಟ್ಟಿಕೊಳ್ಳಲು ತಳ್ಳುಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ರಯೀಸಾ ಅನ್ಸಾರಿಯ ತಳ್ಳುಗಾಡಿಯನ್ನು ತೆರವುಗೊಳಿಸುವಂತೆ ಇಲ್ಲಿನ ಸ್ಥಳೀಯಾಡಳಿತ ಆದೇಶಿಸಿರುವುದು ದುರದೃಷ್ಟಕರ. ತಮ್ಮ ತರಕಾರಿ ಮಾರಾಟದ ತಳ್ಳುಗಾಡಿಯನ್ನು ತೆರವುಗೊಳಿಸುವಂತೆ ಆದೇಶಿಸಿರುವ ನಗರಾಡಳಿತದ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿ ರಯೀಸಾ ವೀಡಿಯೊದಲ್ಲಿ ಮಾತನಾಡಿದ್ದಾರೆ.

- Advertisement -

ಮಧ್ಯಪ್ರದೇಶದ ಇಂಧೋರ್ ನಲ್ಲಿ ಮೆಟಿರೀಯಲ್ ಸೈನ್ಸ್ ವಿಷಯದಲ್ಲಿ ರಯೀಸಾ ಪಿಎಚ್ ಡಿ ಪದವಿ ಪಡೆದಿದ್ದಾರೆ. ಬಡ ಕುಟುಂಬದಿಂದ ಬಂದ ಅವರು ಇಷ್ಟೊಂದು ಸಾಧನೆ ಮಾಡಿದ್ದರೂ, ಸಮುದಾಯದ ವಿರುದ್ಧ ಇರುವ ಪೂರ್ವಾಗ್ರಹ ಭಾವನೆಯಿಂದಾಗಿ ಅವರಿಗೆ ಉದ್ಯೋಗ ದೊರೆತಿಲ್ಲ ಎನ್ನಲಾಗಿದೆ.

“ನನಗೆ ಯಾರು ಉದ್ಯೋಗ ನೀಡುತ್ತಾರೆ? ನನ್ನ ಕುಟುಂಬ ಬದುಕಲು ಯಾರು ಸಹಾಯ ಮಾಡುತ್ತಾರೆ? ನನ್ನ ಹೆಸರು ರಯೀಸಾ ಅನ್ಸಾರಿ. ಇದೇ ಕಾರಣಕ್ಕೆ ನನಗೆ ಉದ್ಯೋಗ ದೊರೆಕುತ್ತಿಲ್ಲ’’ ಎಂದು ಈ ವೈರಲ್ ವೀಡಿಯೊದಲ್ಲಿ ರಯೀಸಾ ಹೇಳಿದ್ದಾರೆ.

“ನಮ್ಮ ಕುಟುಂಬ 50 ವರ್ಷಗಳಿಂದ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದೆ. ನಮ್ಮ ವಸ್ತುಗಳನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಮುನ್ಸಿಪಾಲಿಟಿ ಬಯಸುವುದಾದರೆ, ನಮ್ಮ ಕುಟುಂಬ ಬದುಕಲು ಸಹಾಯ ಮಾಡುವವರು ಯಾರು?’’ ಎಂದು ಅವರು ಪ್ರಶ್ನಿಸಿದ್ದಾರೆ. ರಯೀಸಾ ಕುಟುಂಬದಲ್ಲಿ 23 ಮಂದಿ ಸದಸ್ಯರಿದ್ದು, ತರಕಾರಿ ಮಾರಾಟದಿಂದ ಇವರ ಜೀವನ ನಡೆಯುತಿತ್ತು.

ಇಂಧೋರ್ ನ ದೇವಿ ಅಹಿಲ್ಯಾ ವಿಶ್ವವಿದ್ಯಾಲಯದಿಂದ 2011ರಲ್ಲಿ ಪಿಎಚ್ ಡಿ ಪದವಿ ಪದೆದಿದ್ದರೂ, ಇಲ್ಲಿವರೆಗೆ ರಯೀಸಾರಿಗೆ ಯಾವುದೇ ಉದ್ಯೋಗ ಸಿಕ್ಕಿಲ್ಲ.

- Advertisement -