ಉತ್ತರ ಪ್ರದೇಶ: 65ವರ್ಷದ ದಲಿತ ವೃದ್ಧನಿಗೆ ಬಲವಂತವಾಗಿ ಮೂತ್ರ ಕುಡಿಸಿದ ದುಷ್ಕರ್ಮಿಗಳು

Prasthutha|


ಲಕ್ನೋ : ಉತ್ತರಪ್ರದೇಶದ ಲಲಿತಪುರದಲ್ಲಿ ದಲಿತ ವೃದ್ಧನಿಗೆ ಬಲವಂತವಾಗಿ ಮೂತ್ರ ಕುಡಿಸಿದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಲಲಿತ್ ಪುರದ ರೋಡಾ ಗ್ರಾಮದ ನಿವಾಸಿ ಅಮರ್ ಎಂಬ 65 ವರ್ಷದ ದಲಿತ ವೃದ್ಧ ಈ ಪ್ರಕರಣದ ಬಲಿಪಶು. ಮೂತ್ರವನ್ನು ಕುಡಿಯಲು ಒತ್ತಾಯಿಸಿ ಅಮರ್ ಮತ್ತು ಅವರ ಮಗನನ್ನು ದುಷ್ಕರ್ಮಿಗಳು ಹಿಂಸಿಸಿದ್ದಾರೆ.
ಅಮರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಹಿಂಸೆಯ ನೇತೃತ್ವ ವಹಿಸಿದ್ದ ಸೋನು ಯಾದವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋನು ಯಾದವ್ ಕೊಡಲಿಯಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದನು.
ಈ ಘಟನೆಯ ಹಿಂದೆ ಗ್ರಾಮದ ಕೆಲವು ಪ್ರಭಾವೀ ವ್ಯಕ್ತಿಗಳು ಇದ್ದಾರೆ ಎಂದು ಎಸ್ಪಿ ಮಿಶ್ರಾ ಮನ್ಸಾರ್ ಬೇಗ್ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.

- Advertisement -