ಉಡುಪಿ ಶಿರೂರಿನ ಮಣೆಗಾರ್ ಮಿರಾನ್ ಸಾಹೇಬ್ ಗೆ ರಾಜ್ಯೋತ್ಸವ ಪ್ರಶಸ್ತಿ
Prasthutha: October 28, 2020

ಉಡುಪಿ : ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡ 65 ಮಂದಿಯ ಪಟ್ಟಿಯಲ್ಲಿ ಸಮಾಜ ಸೇವಾ ವಿಭಾಗದಲ್ಲಿ ಶಿರೂರು ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಮಣೆಗಾರ್ ಮಿರಾನ್ ಸಾಹೇಬ್ ಆಯ್ಕೆಯಾಗಿದ್ದಾರೆ.
ಮಣೆಗಾರ್ ಮಿರಾನ್ ಸಾಹೇಬ್ ಶಿರೂರಿನ ಅಭಿವೃದ್ಧಿಯಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ ಕನ್ನಡದ ನಾಡು-ನುಡಿಗೆ ಸೇವೆ ಮಾಡಿರುವ ಅನಿವಾಸಿ ಭಾರತೀಯರಾಗಿರುವ ಮಿರಾನ್ ಸಾಹೇಬ್, ಹೊರನಾಡಿನಲ್ಲಿ ಕನ್ನಡಿಗರ ಸಂಘಟನೆಗಾಗಿ ವಿವಿಧ ಸಂಸ್ಥೆಗಳ ಜವಾಬ್ದಾರಿ ಮತ್ತು ಆದ್ಯತೆಯ ಮೇರೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.
ಮಿರಾನ್ ಸಾಹೇಬ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಕನ್ನಡಿಗರಿಗಾಗಿ ಅವರ ಸೇವೆಗೆ ಸಂದ ಗೌರವವಾಗಿದೆ.
