ಉಡುಪಿ ಖಾಝಿಯಾಗಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್

Prasthutha|

ಉಡುಪಿ: ಕರ್ನಾಟಕ ಸುನ್ನಿ ಜಮಿಯ್ಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಎಮ್.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರು ಉಡುಪಿ ಸಂಯುಕ್ತ ಜಮಾಅತ್ ನ ಖಾಝಿ ಆಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ನೂರಕ್ಕೂ ಹೆಚ್ಚು ಮಸೀದಿಗಳು ಅವರ ಅಧೀನಕ್ಕೆ ಬರಲಿದೆ.

ಕಳೆದ ತಿಂಗಳು ಬೇಕಲ ಇಬ್ರಾಹೀಂ ಮುಸ್ಲಿಯಾರ್ ರವರ ನಿಧನರಾದ ಬಳಿಕ ಖಾಝಿ ಸ್ಥಾನವು ತೆರವಾಗಿತ್ತು.

- Advertisement -

ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೆಜಾರ್ ರವರ ನೇತೃತ್ವದಲ್ಲಿ ನಡೆದ ಸಂಯುಕ್ತ ಜಮಾಅತ್ ನ  ವಿಶೇಷ ಮಹಾಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.   

ಎಮ್.ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು ಅಕ್ಟೋಬರ್ 10ರಂದು ಬೆಳಗ್ಗೆ 10 ಗಂಟೆಗೆ ಮೂಳೂರು ಕೇಂದ್ರ ಮಸೀದಿಯಲ್ಲಿ  ಹೊಸ ಖಾಝಿಯಾಗಿ ತನ್ನ ಸೇವೆಯನ್ನು ಆರಂಭಿಸಲಿದ್ದಾರೆ.

- Advertisement -