ಈಗ ‘ಹಿಂದೂ ವಿರೋಧಿ’ಯಾಗುವ ಸರದಿ ‘ಬಿಗ್ ಬಿ’ಯದ್ದು!I ಅಮಿತಾಬ್ ವಿರುದ್ಧ ಹಿಂದೂ ಭಾವನೆ ಕೆರಳಿಸಿದ್ದಕ್ಕೆ ಎಫ್.ಐ.ಆರ್

Prasthutha|

ಹೊಸದಿಲ್ಲಿ: ಶುಕ್ರವಾರದ ‘ಕರ್ಮವೀರ ವಿಶೇಷ’ ಸಂಚಿಕೆಯಲ್ಲಿ ಎತ್ತಿದ ಪ್ರಶ್ನೆಯೊಂದು ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ರ ‘ಕೌನ್ ಬನೇಗಾ ಕ್ರೋರ್ ಪತಿ 12” ದೂರದರ್ಶನ ಕಾರ್ಯಕ್ರಮವನ್ನು ಸಮಸ್ಯೆಯಲ್ಲಿ ಸಿಲುಕಿದೆ. ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಿದ ಆರೋಪದಲ್ಲಿ ಬಿಗ್ ಬಿ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಬೆಝ್ವಾಡಾ ವಿಲ್ಸನ್ ಮತ್ತು ನಟ ಅನೂಪ್ ಸೋನಿ ಬಿಗ್ ಬಿ ಮುಂದೆ ಆಸೀನರಾಗಿದ್ದರು. ಪ್ರಶ್ನೆಯು ರೂ.6,40,000 ಬೆಲೆಬಾಳುವಂತದ್ದಾಗಿತ್ತು.

- Advertisement -

ಪ್ರಶ್ನೆ: 1927ರ ಡಿಸೆಂಬರ್ 25ರಂದು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಧರ್ಮಗ್ರಂಥದ ಪ್ರತಿಯನ್ನು ಸುಟ್ಟುಹಾಕಿದ್ದರು?

ಆಯ್ಕೆಗಳು: (ಎ) ವಿಷ್ಣು ಪುರಾಣ (ಬಿ) ಭಗವದೀತೆ (ಸಿ) ರಿಗ್ವೇದ (ಡಿ) ಮನುಸ್ಮೃತಿ

ಪ್ರಶ್ನೆಗೆ ಉತ್ತರ ‘ಮನುಸ್ಮೃತಿ’ ಎಂದಾಗಿತ್ತು. ಇದನ್ನು ಪ್ರಕಟಿಸಿದ ಬಳಿಕ ಅಮಿತಾಬ್ ಬಚ್ಚನ್ ಹಿಂದಿಯಲ್ಲಿ ಆ ಕುರಿತು ವಿವರಣೆಯನ್ನು ನೀಡುತ್ತಾ, “1927ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಾಚೀನ ಹಿಂದೂ ಗ್ರಂಥ ಮನುಸ್ಮೃತಿಯನ್ನು ಖಂಡಿಸಿದ್ದರು ಮತ್ತು ಅದರ ಪ್ರತಿಗಳನ್ನು ಸುಟ್ಟುಹಾಕಿದ್ದರು” ಎಂದಿದ್ದರು.

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದುತ್ವ ಗುಂಪುಗಳು ಕೆರಳಿದ್ದು, ‘ ಕೆಬಿಸಿ 12 ಬಹಿಷ್ಕರಿಸಿ’ ಎಂದು ಹಲವರು ಟ್ವೀಟ್ ಮಾಡಿದ್ದರು.

ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಈ ಎಪಿಸೋಡ್ ನ ಕ್ಲಿಪ್ ವೊಂದನ್ನು ಪೋಸ್ಟ್ ಮಾಡಿ, “ಕೆಬಿಸಿ ಕಮ್ಯುನಿಸ್ಟರಿಂದ ಅಪಹರಣಗೊಂಡಿದೆ. ಅಮಾಯಕ ಮಕ್ಕಳೇ, ಹೇಗೆ ಸಂಸ್ಕೃತಿ ಯುದ್ಧಗಳು ಗೆಲ್ಲುತ್ತದೆಯೆಂದು ತಿಳಿಯಿರಿ. ಕೋಡಿಂಗ್ ಎಂದರೆ ಇದುವೇ” ಎಂಬುದಾಗಿ ಬರೆದಿದ್ದರು.

- Advertisement -