ಇಸ್ರೇಲ್ ಗೆ ಯುಎಇಯ ಪ್ರಥಮ ಪ್ರಯಾಣಿಕ ವಿಮಾನ ಪ್ರಯಾಣ


ಅಬುಧಾಬಿ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ವಿಮಾನ ಇಸ್ರೇಲ್ ಗೆ ತನ್ನ ಮೊದಲ ಪ್ರಯಾಣ ನಡೆಸಿತು. ಮೈತ್ರಿ ಸಹಜ ಸ್ಥಿತಿಗೆ ಮರಳುವ ಕುರಿತ ಒಪ್ಪಂದ ನಡೆದು ತಿಂಗಳ ಬಳಿಕ, ಟೆಲ್ ಅವೀವ್ ನಲ್ಲಿ ಯುಎಇ ವಿಮಾನ ಪ್ರಥಮ ಭೂಸ್ಪರ್ಷ ನಡೆಸಿದೆ.

ಇತಿಹಾದ್ ಏರ್ ವೇಸ್ ವಿಮಾನ 9607 ವಿಮಾನ ಇಸ್ರೇಲ್ ನ ಟೆಲ್ ಅವೀವ್ ಸಮೀಪದ ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮುಂಜಾನೆ 7 ಗಂಟೆಗೆ ಭೂಸ್ಪರ್ಷ ನಡೆಸಿತು. ಕೆಲವುಗಂಟೆಗಳ ಬಳಿಕ ಅಬುಧಾಬಿಗೆ ದ ಬೋಯಿಂಗ್ 787 ವಿಮಾನ ಹಾರಾಟ ನಡೆಸಿತು. ಇಸ್ರೇಲಿ ಪ್ರವಾಸೋದ್ಯಮಿಗಳ ನಿಯೋಗವೊಂದು ವಿಮಾನದಲ್ಲಿ ಪ್ರಯಾಣ ನಡೆಸಿತು.

- Advertisement -

ಇಸ್ರೇಲಿ ಕಂಪೆನಿ ಮಮನ್ ಗ್ರೂಪ್ ಇಸ್ರೇಲಿ ಪ್ರವಾಸೋದ್ಯಮಿಗಳಿಗೆ ಯುಎಇಗೆ ಎರಡು ದಿನಗಳ ಪ್ರವಾಸ ಆಯೋಜಿಸಿದೆ ಎಂದು ಕಂಪೆನಿ ವಕ್ತಾರ ತಿಳಿಸಿದ್ದಾರೆ. ಇಸ್ರೇಲ್ ಗೆ ಪ್ರಯಾಣಿಸಿದ ಪ್ರಥಮ ಪ್ರಯಾಣಿಕ ವಿಮಾನ ಎಂಬ ಹೆಗ್ಗಳಿಕೆ ಇತಿಹಾದ್ ಏರ್ ವೇಸ್ ಗೆ ಲಭಿಸಿದೆ. ಆ ಮೂಲಕ ಇತಿಹಾಸ ಸೃಷ್ಟಿಯಾಗಿದೆ ಎಂದು ವಿಮಾನ ಸಂಸ್ಥೆ ಟ್ವೀಟ್ ಮಾಡಿದೆ.

- Advertisement -