ಇಸ್ರೇಲ್‌ಗೆ ವಿಶ್ವಸಂಸ್ಥೆ ತರಾಟೆ

0
444

ಜೆರುಸಲೇಮ್: ಗಾಝಾ ಪಟ್ಟಿಯೊಂದಿಗೆ ಇರುವ ತನ್ನ ಏಕೈಕ ಸರಕು ಗಡಿದ್ವಾರವನ್ನು ಮುಚ್ಚಿರುವ ಇಸ್ರೇಲ್‌ನ ಕ್ರಮವನ್ನು ವಿಶ್ವಸಂಸ್ಥೆ ಟೀಕಿಸಿದೆ ಹಾಗೂ ಈ ಕ್ರಮವು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ಎಚ್ಚರಿಸಿದೆ.

ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರ ನಿಕೊಲಾಯ್ ಮ್ಲಾದೆನೊವ್ ಇಸ್ರೇಲನ್ನು ಒತ್ತಾಯಿಸಿದ್ದಾರೆ. ಹಮಾಸನ್ನು ದುರ್ಬಲಗೊಳಿಸುವ ಪ್ರಯತ್ನವಾಗಿ ಇಸ್ರೇಲ್ ಮತ್ತು ಈಜಿಪ್ಟ್ ಹತ್ತು ವರ್ಷಗಳಿಂದ ಗಾಝಾದ ಮೇಲೆ ದಿಗ್ಬಂಧನ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ದಿಗ್ಬಂಧನದಿಂದಾಗಿ ಫೆಲೆಸ್ತೀನ್ ಜನರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

  ಇಸ್ರೇಲ್‌ನ ಇತ್ತೀಚಿನ ಕ್ರಮದ ಪರಿಣಾಮಗಳ ಬಗ್ಗೆ ತಾನು ಚಿಂತಿತನಾಗಿದ್ದೇನೆ ಎಂದು ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರ ಹೇಳಿದ್ದಾರೆ. ‘‘ಮಾನವೀಯ ನೆರವು ವ್ಯಾಪಾರ ಮತ್ತು ವಾಣಿಜ್ಯಕ್ಕೆ ಬದಲಿಯಲ್ಲ’’ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here