December 25, 2020

ಇಸ್ರೇಲಿ ಮಿಸೈಲನ್ನು ತಡೆದ ಸಿರಿಯಾ

ಹಮಾ: ಪಶ್ಚಿಮ ಸಿರಿಯಾದ ಹಮಾ ನಗರದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿಸಿ ಲೆಬನಾನ್ ವಾಯು ಪ್ರದೇಶದಿಂದ ಇಸ್ರೇಲ್ ಯುದ್ಧವಿಮಾನಗಳು ಎಸೆದ ಮಿಸೈಲ್ ಗಳನ್ನು ಸಿರಿಯಾದ ವಾಯು ರಕ್ಷಣೆಯು ತಡೆದಿದೆ.

ದೇಶದ ಕ್ಷಿಪಣಿ ವಿರೋಧಿ ಉಪಕರಣವು ಸ್ಫೋಟಕಗಳನ್ನು ಅರ್ಧದಲ್ಲೇ ತಡೆದು ನಾಶಗೊಳಿಸಲು ಯಶಸ್ವಿಯಾಗಿದೆ ಎಂದು ಅಧಿಕೃತ ಸಿರಿಯನ್ ಅರಬ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ತನ್ಮಧ್ಯೆ ಸರಕಾರಿ ದೂರದರ್ಶನವು ಯಶಸ್ವಿ ರಕ್ಷಣಾ ಕಾರ್ಯಾಚರಣೆಯ ವೀಡಿಯೊಗಳನ್ನು ಪ್ರಸಾರ ಮಾಡಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ