ಇಂದು ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದೆ ಗಾಂಧಿ ವರ್ಣ ಚಿತ್ರ

Prasthutha|

ದುಬೈ : ಮಹಾತ್ಮಾ ಗಾಂಧಿಯವರ 151ನೇ ಜನ್ಮದಿನದ ಅಂಗವಾಗಿ ಬುರ್ಜ್ ಖಲೀಫಾದ ಗೋಡೆಗಳ ಮೇಲೆ ಬೃಹತ್ ವರ್ಣಚಿತ್ರಗಳ ಪ್ರದರ್ಶನ ನಡೆಯಲಿದೆ. ಪ್ರದರ್ಶನವು ಸ್ಥಳೀಯ ಕಾಲಮಾನ ರಾತ್ರಿ 8.15ಕ್ಕೆ ಪ್ರಸಾರವಾಗಲಿದೆ.

ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಗಾಂಧೀಜಿಯವರ ಜನ್ಮದಿನವನ್ನು ಅಹಿಂಸಾ ದಿನವೆಂದು ಆಚರಿಸಲಾಗುತ್ತದೆ. ಗಾಂಧೀಜಿಯವರ ಜನ್ಮದಿನವನ್ನು ಅತಿ ಎತ್ತರದ ಕಟ್ಟಡದಲ್ಲಿ ಆಚರಿಸಲು ನಿರ್ದೇಶನ ನೀಡಿದ್ದಕ್ಕಾಗಿ ಇಮಾರ್ ಪ್ರಾಪರ್ಟೀಸ್ ಗೆ ದುಬೈನ ಇಂಡಿಯನ್ ಕಾನ್ಸುಲೇಟ್ ಧನ್ಯವಾದ ಅರ್ಪಿಸಿದೆ.

- Advertisement -