October 1, 2020

ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಕ್ರೀಡಾಕೂಟ

ಇಂಡಿಯನ್ ಸೋಷಿಯಲ್ ಫೋರಂ (ISF) ಕರ್ನಾಟಕ ಸೌದಿ ಅರೇಬಿಯಾ ಬೈಶ್ ಘಟಕವು ಸೌದಿ ನ್ಯಾಷನಲ್ ಡೇ ಪ್ರಯುಕ್ತ ಆಯೋಜಿಸಿದ್ದ ‌”ವಾಲಿಬಾಲ್ ಪಂದ್ಯಾಟ 2020″ ಬೈಶ್ ನ ಫೆನ್ಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ದುಡಿಯಲು ಆಸರೆ ಒದಗಿಸಿದ ಕರ್ಮಭೂಮಿ ಸೌದಿ ಅರೇಬಿಯಾದ ನ್ಯಾಷನಲ್ ಡೇ ಸಂಭ್ರಮದಲ್ಲಿ ತಾಯ್ನಾಡನ್ನು ಪ್ರೀತಿಸುವುದರೊಂದಿಗೆ ಉದ್ಯೋಗ ಕೊಟ್ಟ ನಾಡನ್ನೂ ಪ್ರೀತಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಅನಿವಾಸಿ ಭಾರತೀಯರಿಗಾಗಿ ನಡೆದ ಬೈಶ್ ವಾಲಿಬಾಲ್ ಪಂದ್ಯಾಕೂಟದಲ್ಲಿ ಪ್ರತಿಷ್ಟಿತ 10 ತಂಡಗಳು ಭಾಗವಹಿಸಿದ್ದವು.

ರೋಮಾಂಚಕಾರಿಯಾಗಿ ನಡೆದ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟವನ್ನು ಆಂಪ್ಲಿಟ್ಯೂಡ್ ತಂಡವು ಫ್ರೆಂಡ್ಸ್ ಮಂಗಳೂರು ತಂಡವನ್ನು ಮಣಿಸಿ ತನ್ನದಾಗಿಸಿಕೊಂಡಿತು.

ಪಂದ್ಯಾಟವನ್ನು ಇಂಡಿಯನ್ ಸೋಷಿಯಲ್ ಫಾರಂ ISF ಇದರ ಅಸೀರ್ ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರಾದ ಹನೀಫ್ ಮಂಜೇಶ್ವರರವರು ಉಧ್ಘಾಟಿಸಿದರು. ಕ್ರೀಡೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಇಕ್ಬಾಲ್ ಕೂಳೂರು,ಅಧ್ಯಕ್ಶರು IFF ಜಿಝಾನ್ ಕರ್ನಾಟಕ ಚಾಪ್ಟರ್ ಸಮಾರೋಪ ಸಂದೇಶ ನೀಡಿದರು.ಮುಖ್ಯ ಅತಿಥಿಗಳಾಗಿ ಹನೀಫ್ ಜೋಕಟ್ಟೆ (ಕಾರ್ಯದರ್ಶಿ IFF ಜಿಝಾನ್ ಕರ್ನಾಟಕ) ಹಾಗೂ ನೂರ್ ಬಜಾಲ್,ನಝ್ಮಾನ್ ಇಬ್ದಾ,ಹನೀಫ್ ಕ್ರಷ್ಣಾಪುರ ಉಪಸ್ಥಿತರಿದ್ದರು.
ISF ಬೈಶ್ ಘಟಕದ ಅಝೀದ್ ಮೂಡಬಿದ್ರೆಯವರು ಸ್ವಾಗತಿಸಿ,ತನ್ಶೀರ್ ಬಜ್ಪೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು

ಟಾಪ್ ಸುದ್ದಿಗಳು

ವಿಶೇಷ ವರದಿ