ಆಸ್ಟ್ರೇಲಿಯಾ: ಗರ್ಭಿಣಿ ಮಹಿಳೆಯ ಮೇಲೆ ಇಸ್ಲಾಮೋಫೋಬಿಕ್ ದಾಳಿ ನಡೆಸಿದಾತನಿಗೆ ಮೂರು ವರ್ಷ ಸಜೆ

Prasthutha|

ಸಿಡ್ನಿ: ಇಸ್ಲಾಮೋಫೋಬಿಕ್ ದಾಳಿಯೊಂದರಲ್ಲಿ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ.

ವ್ಯಕ್ತಿಯನ್ನು 44ರ ಹರೆಯದ ಸ್ಟೈಪ್ ಲೊಝಿನಾ ಎಂದು ಗುರುತಿಸಲಾಗಿದೆ. ಆತ ಕಳೆದ ವರ್ಷದ ನವೆಂಬರ್ ನಲ್ಲಿ ಸಿಡ್ನಿಯಲ್ಲಿ 32ರ ಹರೆಯದ ರಾಣಾ ಎಲಸ್ಮಾರ್ ಎಂಬ ಮಹಿಳೆಯನ್ನು ಗುದ್ದಿ ನೆಲಕ್ಕೆ ಹಾಕಿ ತುಳಿದಿದ್ದ. ತನ್ನ ಸ್ನೇಹಿತರೊಂದಿಗೆ ಕೆಫೆಯೊಂದರಲ್ಲಿದ್ದಾಗ  ನಾಲ್ಕು ಮಕ್ಕಳ ತಾಯಿ ಎಲೆಸ್ಮಾರ್ ಮೇಲೆ ದಾಳಿ ನಡೆದಿತ್ತು. ಆಗ ಅವರು 38 ವಾರಗಳ ಗರ್ಭಿಣಿಯಾಗಿದ್ದರು.

- Advertisement -

ಲೊಝಿನಾ ಹಣ ನೀಡುವಂತೆ ಕೇಳಿ ಅವರ ಟೇಬಲ್ ಬಳಿ ಬಂದಿದ್ದ. ಎಲಸ್ಮಾರ್ ನಿರಾಕರಿಸಿದಾಗ, ಆತ ಧಾರ್ಮಿಕ ಪೂರ್ವಾಗ್ರಹದ ಈ ಕೆಟ್ಟ ಆಕ್ರಮಣವನ್ನು ಮಾಡಿದ್ದ. ಆತ ಆಕೆಯನ್ನು ಗುದ್ದಿ ನೆಲಕ್ಕೆ ಹಾಕಿದ್ದ.  ಗರ್ಭಿಣೆ ಮಹಿಳೆಗೆ 14 ಬಾರಿ ಹೊಡೆದಿದ್ದ ಮತ್ತು ತಲೆಯ ಹಿಂಭಾಗಕ್ಕೆ ತುಳಿದಿದ್ದ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.

- Advertisement -