ಆಸಿಫ್ ಖಾನ್ ಗುಂಪು ಹತ್ಯೆಯನ್ನು ಸಮರ್ಥಿಸಿ ದ್ವೇಷ ಭಾಷಣ ಮಾಡಿದ್ದ ಸೂರಜ್ ಈಗ ಬಿಜೆಪಿ ವಕ್ತಾರ!

Prasthutha: June 12, 2021

ಬಿಜೆಪಿಯಲ್ಲಿ ಯಾವುದಾದರೂ ಹುದ್ದೆ ಪಡೆಯಬೇಕಾದರೆ ಮುಸ್ಲಿಮ್ ವಿರೋಧಿ ನಿಲುವು ಸಾಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇತ್ತೀಚೆಗೆ ಹರ್ಯಾಣದ ಮೇವತ್ ನಲ್ಲಿ ಆಸಿಫ್ ಖಾನ್‌ ಎಂಬ ಮುಸ್ಲಿಮ್ ಯುವಕನ ಗುಂಪು ಹತ್ಯೆ ನಡೆದಿತ್ತು. ಈ ಹತ್ಯೆಯನ್ನು ಸಮರ್ಥಿಸಿದ ಹಿಂದುತ್ವ ಕೋಮುವಾದಿ ಸೂರಜ್ ಪಾಲ್ ಅಮು ಅವರನ್ನು ಬಿಜೆಪಿಯ ರಾಜ್ಯ ವಕ್ತಾರನನ್ನಾಗಿ ನೇಮಿಸಲಾಗಿದೆ.


53 ವರ್ಷ ಪ್ರಾಯದ ಈ ಹಿಂದುತ್ವ ನಾಯಕ ಬಹಿರಂಗವಾಗಿ ದ್ವೇಷ ಭಾಷಣ ಮಾಡುತ್ತಿದ್ದರೂ ಪೊಲೀಸ್ ಇಲಾಖೆ ಮೌನವಹಿಸಿದೆ. ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕ ಸಭೆ ನಡೆಸುವಂತಿಲ್ಲ ಎಂಬ ನಿಯಮ ಇವರಿಗೆ ಅನ್ವಯವಾಗುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸ್ವಯಂ ಘೋಷಿತ ಕರ್ಣಿ ಸೇನಾ ಮುಖ್ಯಸ್ಥನಾಗಿರುವ ಸೂರಜ್ ಪಾಲ್ ಮೇ 30ರಂದು ನಡೆದ ಮಹಾಪಂಚಾಯತ್ ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಕಾರುವ ಭಾಷಣ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಆಸಿಫ್ ಖಾನ್ (25) ನನ್ನು ಇತ್ತೀಚೆಗೆ ಹಿಂದುತ್ವ ಗುಂಪು ಹತ್ಯೆ ಮಾಡಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ