ಆದಿತ್ಯಾ ಬಿರ್ಲಾ ಸಮೂಹ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಮಗಳು ಅನನ್ಯಾ ಬಿರ್ಲಾಗೆ ಜನಾಂಗೀಯ ನಿಂದನೆ

Prasthutha: October 26, 2020

ನ್ಯೂಯಾರ್ಕ್ : ಭಾರತದಲ್ಲಾಗುವ ಜನಾಂಗೀಯ ದ್ವೇಷ, ಜಾತಿ ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ನೆಪಮಾತ್ರಕ್ಕೂ ಖಂಡಿಸದ ಜನಕ್ಕೆ ಸ್ವತಃ ಇನ್ನೊಂದು ದೇಶದಲ್ಲಿ ಅಂತಹುದೇ ಅನುಭವವಾದರೆ ಹೇಗಿರುತ್ತದೆ ಅವರ ಪ್ರತಿಕ್ರಿಯೆ? ಬಹುಷಃ ತೀವ್ರ ಆಘಾತವಂತೂ ಅವರನ್ನೂ ಕಾಡುತ್ತದೆ. ಅಮೆರಿಕದ ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್ ಒಂದರಲ್ಲಿ ಜನಾಂಗೀಯ ನಿಂದನೆಯ ನಡವಳಿಕೆ ನಡೆದಿದೆ ಎಂದು ನಟಿ, ಗಾಯಕಿ ಅನನ್ಯಾ ಬಿರ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನನ್ಯಾ ಅವರು ಆದಿತ್ಯಾ ಬಿರ್ಲಾ ಸಮೂಹದ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅವರ ಮಗಳು.

ಕ್ಯಾಲಿಫೋರ್ನಿಯಾದ ಸ್ಕೊಪಾ ರೆಸ್ಟೋರೆಂಟ್ ನಲ್ಲಿ ತನ್ನ ಜೊತೆ, ತನ್ನ ಕುಟುಂಬವನ್ನು ಅಕ್ಷರಶಃ ಹೊರದಬ್ಬಿದರು. ಇದು ಕ್ರೂರ ನಡವಳಿಕೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನಿಮ್ಮ ಗ್ರಾಹಕರ ಜೊತೆ ನೀವು ನಡೆದುಕೊಳ್ಳುವ ರೀತಿಯೇ? ಜನಾಂಗೀಯ ದ್ವೇಷದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅನನ್ಯಾ ಟ್ವೀಟ್ ಮಾಡಿದ್ದಾರೆ.

ನಿಮ್ಮ ರೆಸ್ಟೋರೆಂಟ್ ನಲ್ಲಿ ಊಟ ಮಾಡಲು ಮೂರು ಗಂಟೆಗಳ ಕಾಲ ಕಾದೆವು, ನಿಮ್ಮ ರೆಸ್ಟೋರೆಂಟ್ ನಲ್ಲಿ ವೇಟರ್ ಜೊಶುವಾ ಸಿಲ್ವರ್ ಮನ್ ನನ್ನ ತಾಯಿಯ ಜೊತೆ ತುಂಬಾ ಕೆಟ್ಟದಾಗಿ ನಡೆದುಕೊಂಡ, ಇದು ಸರಿಯಲ್ಲ ಎಂದು ಮತ್ತೊಂದು ಟ್ವೀಟ್ ನಲ್ಲಿ ಹರಿಹಾಯ್ದಿದ್ದಾರೆ.

ರೆಸ್ಟೋರೆಂಟ್ ಸಿಬ್ಬಂದಿಯ ವರ್ತನೆ ಕಂಡು ತುಂಬಾ ಆಘಾತವಾಗಿದೆ. ಯಾವೊಬ್ಬ ಗ್ರಾಹಕರನ್ನೂ ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ನಿಮಗಿಲ್ಲ ಎಂದು ಅನನ್ಯಾ ಅವರ ತಾಯಿ ನೀರಜಾ ಬಿರ್ಲಾ ಟ್ವೀಟ್ ಮಾಡಿದ್ದಾರೆ.

“ನನಗೆ ಇದು ವರೆಗೂ ಇಂತಹ ಯಾವುದೇ ಅನುಭವ ಆಗಿರಲಿಲ್ಲ. ಜನಾಂಗೀಯ ದ್ವೇಷ ಅಸ್ತಿತ್ವದಲ್ಲಿರುವುದಕ್ಕೆ ಈ ಘಟನೆಯೇ ಸಾಕ್ಷಿ, ಇದನ್ನು ನಂಬಲಾಗುತ್ತಿಲ್ಲ’’ ಎಂದು ಅನನ್ಯಾ ಅವರ ಸಹೋದರ ಆರ್ಯಮನ್ ಬಿರ್ಲಾ ಟ್ವಿಟರ್ ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!