December 5, 2020

ಅವಹೇಳನಕಾರಿ ಟ್ವೀಟ್ | ಕ್ಷಮೆಯಾಚಿಸುವಂತೆ ಕಂಗನಾಗೆ ಕಾನೂನು ನೋಟಿಸ್

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಕಾರರ ವಿರುದ್ಧದ ಅವಹೇಳನಕಾರಿ ಟ್ವೀಟ್ ಗಳಿಗೆ ಕ್ಷಮೆಯಾಚಿಸುವಂತೆ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ(ಡಿ.ಎಸ್.ಜಿ.ಎಂ.ಸಿ) ಬಾಲಿವುಡ್ ನಟಿ ಕಂಗನಾ ರನೌತ್ ಗೆ ಕಾನೂನು ನೋಟಿಸ್ ಕಳುಹಿಸಿದೆ ಎಂದು ಸಮಿತಿಯ ಅಧ್ಯಕ್ಷರು ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.

“ರೈತನ ವಯಸ್ಕ ತಾಯಿಯನ್ನು ರೂ.100ಗೆ ಲಭ್ಯವಿರುವ ಮಹಿಳೆ ಎಂಬ ಅವಹೇಳನಕಾರಿ ಟ್ವೀಟ್ ಗಾಗಿ ನಾವು ಕಂಗನಾ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದೇವೆ. ಅವರ ಟ್ವೀಟ್ ಗಳಲ್ಲಿ ರೈತರ ಪ್ರತಿಭಟನೆಯನ್ನು ರಾಷ್ಟ್ರ ವಿರೋಧಿ ಪ್ರತಿಭಟನೆ ಎಂದು ಚಿತ್ರಿಸಲಾಗಿದೆ. ಈ ಹೇಳಿಕೆಗಳ ಬಗ್ಗೆ ಕ್ಷಮೆಯಾಚಿಸುವಂತೆ ನೋಟಿಸ್ ಕಳುಹಿಸಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಿಲ್ಕಿಸ್ ದಾದಿ ಸೇರಿದಂತೆ ಇಬ್ಬರು ವೃದ್ಧ ಮಹಿಳೆಯರ ಚಿತ್ರಗಳನ್ನು ರೀಟ್ವೀಟ್ ಮಾಡಿದ್ದ ಕಂಗನಾ, ಟೈಮ್ ಮ್ಯಾಗಝೀನ್ ನಲ್ಲಿ ಕಾಣಿಸಿಕೊಂಡಿರುವ “ಶಹೀನ್ ಬಾಗ್ ದಾದಿ” 100 ರೂ.ಗೆ ಪ್ರತಿಭಟನೆಗೆ ಲಭ್ಯವಿದ್ದಾರೆ ಎಂದು ಬರೆದಿದ್ದರು.

ಕಂಗನಾ ಅವರು ಈ ವಿಷಯದ ಬಗ್ಗೆ ಪಂಜಾಬಿ ನಟ-ಗಾಯಕ ದಿಲ್ಜಿತ್ ದೋಸಾಂಜ್ ಅವರಿಂದ ಕಟುವಾದ ಟೀಕೆಗೆ ಗುರಿಯಾಗಿದ್ದರು.

ಟಾಪ್ ಸುದ್ದಿಗಳು

ವಿಶೇಷ ವರದಿ